50 ವರ್ಷ ಮೇಲ್ಪಟ್ಟ ಜನರಿಗೆ ಕೋವಿಡ್-19 ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಲು ಕೆಲವೇ ವಾರಗಳು ಇರುವಂತೆ, ಇವರುಗಳಿಗೆ ಲಸಿಕೆಗಳನ್ನು ಉಚಿತವಾಗಿ ಕೊಡಬೇಕೇ ಎಂಬ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಸದ್ಯಕ್ಕೆ ರಾಷ್ಟ್ರವ್ಯಾಪಿ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮಂದಿಗೆ ಮೊದಲ ಹಂತದಲ್ಲಿ ಉಚಿತವಾಗಿ ಲಸಿಕೆ ಕೊಡಲಾಗುತ್ತಿದೆ. ಒಂದು ಕೋಟಿಯಷ್ಟು ಆರೋಗ್ಯ ಕಾರ್ಯರ್ಕರು, 2 ಕೋಟಿ ಮುಂಚೂಣಿ ಕಾರ್ಯಕರ್ತರು ಹಾಗೂ ಮಿಕ್ಕ 27 ಕೋಟಿ ಲಸಿಕೆಗಳನ್ನು 50 ವರ್ಷ ಮೇಲ್ಪಟ್ಟ ಸಾಮಾನ್ಯ ಜನರಿಗೆ ಕೊಡಲು ಆದ್ಯತೆ ನೀಡಲಾಗಿದೆ.
ಕೊರೋನಾ ತಡೆಗೆ ಮತ್ತೊಂದು ಬ್ರಹ್ಮಾಸ್ತ್ರ -ಕೇವಲ 5 ದಿನದಲ್ಲೇ ಸೋಂಕು ನಿವಾರಿಸುವ ಇನ್ಹೇಲರ್ ರೆಡಿ
ಈ ಬಗ್ಗೆ ಮಾತನಾಡಿದ ನೀತಿ ಆಯೋಗದ ಸದಸ್ಯ ಹಾಗೂ ರಾಷ್ಟ್ರೀಯ ಕೋವಿಡ್-19 ಟಾಸ್ಕ್ ಪಡೆಯ ಮುಖ್ಯಸ್ಥ ಡಾ. ವಿ.ಕೆ. ಪೌಲ್, ಲಸಿಕೆ ಕಾರ್ಯಕ್ರಮದ ಆದ್ಯತೆಯ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ 50 ವರ್ಷ ಮೇಲ್ಪಟ್ಟ ಮಂದಿಗೆ ಉಚಿತ ಲಸಿಕೆ ಕೊಡಬೇಕೇ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದಿದ್ದು, ಈ ಬಗ್ಗೆ ರಾಜ್ಯಗಳ ಮುಖ್ಯಸ್ಥರೊಂದಿಗೆ ಕೇಂದ್ರ ಸರ್ಕಾರದ ಸಭೆಗಳು ಶೀಘ್ರವೇ ಆರಂಭಗೊಳ್ಳಲಿವೆ ಎಂದಿದ್ದಾರೆ.