ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ 5 ಲಕ್ಷ ರೂಪಾಯಿ ದೇಣಿಗೆ ಘೋಷಣೆ ಮಾಡಿರುವ ಬೆನ್ನಲ್ಲೇ ಉತ್ತರ ಪ್ರದೇಶದ ರಾಯ್ ಬರೇಲಿಯ ಬೈಸ್ವಾರಾ ಜಿಲ್ಲೆಯ ತೇಜ್ ಗಾಂವ್ನ ಮಾಜಿ ಶಾಸಕ ಸುರೇಂದ್ರ ಬಹದ್ದೂರ್ ಸಿಂಗ್ 1 ಕೋಟಿ ರೂಪಾಯಿಗೂ ಅಧಿಕ ಕೊಡುಗೆ ನೀಡಿದ್ದಾರೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಶವ್ಯಾಪಿ ದೇಣಿಗೆ ಸಂಗ್ರಹ ಕಾರ್ಯಕ್ರಮ ಶುಕ್ರವಾರದಿಂದ ಪ್ರಾರಂಭವಾಗುತ್ತಿದ್ದಂತೆಯೇ ರಾಯ್ ಬರೇಲಿಯ ಬೈಸ್ವಾರಾ ಜಿಲ್ಲೆಯ ತೇಜ್ಗಾಂವ್ನ ಮಾಜಿ ಶಾಸಕ ಸುರೇಂದ್ರ ಬಹದ್ದೂರ್ ಸಿಂಗ್ ವಿಶ್ವಹಿಂದೂ ಪರಿಷತ್ ಉಪಾಧ್ಯಕ್ಷ ಹಾಗೂ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ಗೆ 1,11,11,111 ರೂಪಾಯಿಯ ಚೆಕ್ ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಉಪಮುಖ್ಯಮಂತ್ರಿ ವೆಂಕಯ್ಯ ನಾಯ್ಡು ಕೂಡ 5 ಲಕ್ಷ ರೂಪಾಯಿಯನ್ನ ದೇಣಿಗೆ ರೂಪದಲ್ಲಿ ನೀಡಿದ್ದಾರೆ.