ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಹಿರಿಯ ನಾಯಕಿ ಕರುಣಾ ಶುಕ್ಲಾ ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಪುರದ ಕೇರ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದ್ರು.
ಕರುಣಾ ಶುಕ್ಲಾ, ಭಾರತದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆ ಆಗಿದ್ದಾರೆ. ಎರಡು ಬಾರಿ ಲೋಕಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದ ಕರುಣಾರಿಗೆ 70 ವರ್ಷ ವಯಸ್ಸಾಗಿತ್ತು.
2013ರವರೆಗೆ ಶುಕ್ಲಾ ಬಿಜೆಪಿಯಲ್ಲಿದ್ದರು. ಫೆಬ್ರವರಿ 2014ರಂದು ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಶುಕ್ಲಾರನ್ನ ಬಿಲಾಸ್ಪುರ ಕ್ಷೇತ್ರದಿಂದ ಕಣಕ್ಕೆ ಇಳಿಸಿತ್ತು. ಆದರೆ ಅವರು ಬಿಜೆಪಿಯ ಲಖನ್ ಲಾಲ್ ಸಾಹು ವಿರುದ್ಧ ಪರಾಭವಗೊಂಡಿದ್ದರು.
ಹುಟ್ಟಿನಿಂದ ಬೇರ್ಪಟ್ಟ ಅವಳಿಗಳು 36 ವರ್ಷಗಳ ಬಳಿಕ ಭೇಟಿ
2018ರಲ್ಲಿ ಛತ್ತೀಸಗಢ ವಿಧಾನಸಭಾ ಚುನಾವಣೆಯ ವೇಳೆ ರಾಜನಂದ್ಗಾಂವ್ನಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದರು. ಆದರೆ ಇಲ್ಲಿಯೂ ಸಹ ಬಿಜೆಪಿ ರಮಣ್ ಸಿಂಗ್ ವಿರುದ್ಧ ಸೋತಿದ್ದರು.