alex Certify ಬರಿಗೈಲಿ ಹಾವು ರಕ್ಷಿಸಿದ ಅರಣ್ಯ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಿಗೈಲಿ ಹಾವು ರಕ್ಷಿಸಿದ ಅರಣ್ಯ ಅಧಿಕಾರಿ

ಮನೆಯ ಛಾವಣಿಯಲ್ಲಿ ಅಡಗಿದ್ದ ನಾಗರಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಬರಿಗೈಲಿ ಹಿಡಿದ ವಿಡಿಯೋ ವೈರಲ್ ಆಗಿದೆ.

ಗೋವಾದ ಕೋಟಿಗಾವೊ ವನ್ಯಜೀವಿ ಅಭಯಾರಣ್ಯದ ಅಧಿಕಾರಿ ಹಾವು ರಕ್ಷಿಸುವ ಕಾರ್ಯಾಚರಣೆಯನ್ನು ವಿಡಿಯೋ ಮಾಡಿಕೊಳ್ಳಲಾಗಿತ್ತು. ಅದನ್ನು ಐಎಫ್ಎಸ್ ಅಧಿಕಾರಿ ಶೈಲೇಂದ್ರ ಸಿಂಗ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅರಣ್ಯ ಇಲಾಖೆಯವರು ಆನೆ, ಹುಲಿ ಚಿರತೆಯಷ್ಟೇ ಅಲ್ಲ ಹಾವುಗಳನ್ನೂ ಸಹ ರಕ್ಷಿಸಬೇಕಾಗುತ್ತದೆ ಎಂದು ಅವರು ವಿಡಿಯೋ ಜೊತೆಗೆ ಅಭಿಪ್ರಾಯ‌ ನೀಡಿದ್ದಾರೆ.

ವಿಡಿಯೋದಲ್ಲಿ ತೋರುವಂತೆ, ಅರಣ್ಯ ಇಲಾಖೆ ಅಧಿಕಾರಿಯು ಮನೆಯ ಛಾವಣಿ ಏರಿ ಹಾವನ್ನು ಹುಡುಕುವವರೆಗೂ ಮನೆ ಹಂಚುಗಳನ್ನು ತೆಗೆಯುತ್ತಾರೆ. ಬಳಿಕ ಕೋಲನ್ನು ಬಳಸಿ ಹಾವಿನ ಬಾಲ ಹಿಡಿದುಹೊರಗೆ ತಂದು ಚೀಲದೊಳಗೆ ಹಾಕುತ್ತಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅಧಿಕಾರಿಯು ಯಾವುದೇ ರಕ್ಷಣಾತ್ಮಕ ಸಾಧನ ಬಳಸದೇ ಬರಿಗೈಲಿ ಹಾವು ಹಿಡಿಯುವುದು ನೆಟ್ಟಿಗರ ಗಮನಕ್ಕೆ ಬಂದಿದ್ದು, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...