ನವದೆಹಲಿ: ಶಾಲೆಯ 50 ಮೀ. ಸುತ್ತ ಜಂಕ್ ಫುಡ್ ಮಾರಾಟ ನಿಷೇಧಿಸಲಾಗಿದೆ. ಜಾಹೀರಾತಿಗೂ ನಿರ್ಬಂಧ ಹೇರಲಾಗಿದೆ.
ಶಾಲಾ ಕ್ಯಾಂಟೀನ್, ಮೆಸ್ ಮತ್ತು ಶಾಲೆಯ ಸುತ್ತಲಿನ 50 ಮೀಟರ್ ಪ್ರದೇಶದಲ್ಲಿ ಜಂಕ್ ಪುಡ್ ಮಾರಾಟ, ಜಾಹೀರಾತು ನಿಷೇಧಿಸಿ ಭಾರತೀಯ ಸುರಕ್ಷಿತ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ, ಸುರಕ್ಷಿತ, ಗುಣಮಟ್ಟದ ಪೌಷ್ಠಿಕಾಂಶ ಮತ್ತು ಆಹಾರ ಪದ್ಧತಿಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಆಹಾರ ಉದ್ಯಮ ಪರವಾನಿಗೆ ಮತ್ತು ನೋಂದಣಿ ಕಾನೂನು 2020 ಕಾಯ್ದೆಯ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದ್ದು ದೇಶದ ಎಲ್ಲಾ ಶಾಲೆಗಳಲ್ಲಿ ಜಂಕ್ ಫುಡ್ ಪೂರೈಕೆ, ಜಾಹೀರಾತು ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗಿದೆ.