ಮುಂಬೈ ಅಂದರೆ ಮೊದಲು ನೆನಪಾಗೋದೇ ವಡಾಪಾವ್. ಇದೊಂದು ಬಹಳ ಸಿಂಪಲ್ ತಿಂಡಿ ಆಗಿದ್ದರೂ ಇದನ್ನ ಮಾಡೋಕೆ ವಿಶೇಷವಾದ ಚಾಕಚಕ್ಯತೆ ಇರಬೇಕು ಅನ್ನೋದೂ ಅಷ್ಟೇ ಸತ್ಯ. ಬೀದಿಗಳಲ್ಲಿ ನಿಂತು ನೀವು ಕೂಡ ವಡಾಪಾವ್ನ್ನ ಸವಿದಿರ್ತೀರಾ. ಆದರೆ ಎಂದಾದರೂ ಹಾರುವ ವಡಾಪಾವ್ನ್ನು ಟೇಸ್ಟ್ ಮಾಡಿ ನೋಡಿದ್ದೀರಾ..?
ಅರೆ..! ಇದೇನಿದು ವಡಾಪಾವ್ ಯಾವಾಗ ಹಾರೋಕೆ ಕಲೀತು ಎಂದುಕೊಂಡ್ರಾ..? ಇಲ್ಲೇ ಇರೋದು ಅಸಲಿ ವಿಚಾರ. ಮುಂಬೈನ ಬೋರಾ ಬಜಾರ್ನ ರಘು ದೋಸಾವಾಲಾ ಎಂಬ ಅಂಗಡಿಯ ದೃಶ್ಯ ಇದಾಗಿದ್ದು, ಇಲ್ಲಿ ಅಂಗಡಿ ಮಾಲೀಕ ವಿಭಿನ್ನ ರೀತಿಯಲ್ಲಿ ವಡಾಪಾವ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹಾರುವ ದೋಸೆ ಬಹಳ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಹಾರುವ ವಡಾಪಾವ್ ಕೂಡ ನೆಟ್ಟಿಗರ ಹುಬ್ಬೇರಿಸುತ್ತಿದೆ. ಅಂದಹಾಗೆ ಈ ಹಾರುವ ವಡಾಪಾವ್ನ ಬೆಲೆ ಕೇವಲ 15 ರೂಪಾಯಿ ಆಗಿದೆ.