alex Certify OMG: ಗಾಳಿಯಲ್ಲಿ ಹಾರಿ ಬಂದು ತಟ್ಟೆಗೆ ಬೀಳುತ್ತೆ ದೋಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಗಾಳಿಯಲ್ಲಿ ಹಾರಿ ಬಂದು ತಟ್ಟೆಗೆ ಬೀಳುತ್ತೆ ದೋಸೆ

ದಕ್ಷಿಣ ಭಾರತದ ಆಹಾರ ಪದ್ಧತಿಗೆ ಸರಿ ಸಾಟಿ ಬೇರೊಂದಿಲ್ಲ. ದಕ್ಷಿಣ ಭಾರತದ ಪಾಕ ಪದ್ಧತಿಯಲ್ಲಿ ಎಷ್ಟೊಂದು ತಿನಿಸುಗಳು ಸೇರಿವೆ ಅಂದರೆ ನಿಮಗೆ ಯಾವುದೋ ಒಂದನ್ನ ಆಯ್ಕೆ ಮಾಡಿಕೊಳ್ಳೋದು ಕಷ್ಟ ಎನಿಸಬಹುದು. ಇಡ್ಲಿ – ಸಾಂಬಾರ್​, ವಡಾ, ಬಿಸಿಬೆಳೆ ಬಾತ್​, ದೋಸೆ, ಮೈಸೂರ್​ ಪಾಕ್​, ಮೈಸೂರು ಮಸಾಲಾ ಹೀಗೆ ತಿನಿಸುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ.

ದೋಸೆ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿಂಡಿಗಳಲ್ಲೊಂದು. ದಕ್ಷಿಣ ಭಾರತದ ಯಾವುದೇ ಗಲ್ಲಿಗೆ ಹೋದರೂ ದೋಸೆ ಸಿಗುವ ಹೋಟೆಲ್​ ಇಲ್ಲವೇ ಕ್ಯಾಂಟೀನ್ ಸಿಕ್ಕೇ ಸಿಗುತ್ತದೆ. ಆದರೆ ನೀವೇನಾದರೂ ಮುಂಬೈನಲ್ಲಿದ್ದು ಸಖತ್​ ಆಗಿರುವ ದೋಸೆಯನ್ನ ಟೇಸ್ಟ್ ಮಾಡಬೇಕು ಅಂತಾ ಬಯಸಿದ್ದರೆ ಕಲ್ಬಾದೇವಿಯಲ್ಲಿರುವ ಈ ವಿಶೇಷ ಸ್ಥಳಕ್ಕೆ ಭೇಟಿ ನೀಡಲೇಬೇಕು.

ದಕ್ಷಿಣ ಮುಂಬೈನ ಮಂಗಲ್​ ದಾಸ್​ ಮಾರ್ಕೆಟ್​​ನಲ್ಲಿರುವ ಶ್ರೀ ಬಾಲಾಜಿ ದೋಸಾ ಸೆಂಟರ್​ನಲ್ಲಿ ನಿಮಗೆ ಹಾರುವ ದೋಸಾ ಸಿಗಲಿದೆ. ತರಹೇವಾರಿ ದೋಸೆಗಳಿಗಾಗಿಯೇ ಈ ಫುಡ್​ ಸ್ಟಾಲ್​ ಅತ್ಯಂತ ಫೇಮಸ್​ ಆಗಿದೆ. ದೋಸೆಗಳ ಜೊತೆಯಲ್ಲಿ ಇಲ್ಲಿ ದೋಸೆಯನ್ನ ಬಡಿಸುವ ರೀತಿಯೂ ಸಖತ್​ ಡಿಫರೆಂಟ್​.

ಇಲ್ಲಿ ದೋಸೆ ಹಂಚಿನಿಂದ ನೇರವಾಗಿ ತಟ್ಟೆಗೆ ದೋಸೆ ಬೀಳುತ್ತೆ. ಫೇಸ್​ಬುಕ್​ನಲ್ಲಿ ಶೇರ್​ ಮಾಡಲಾದ ವಿಡಿಯೋವೊಂದರಲ್ಲಿ ದೋಸೆಯನ್ನ ಗಾಳಿಯಲ್ಲಿ ತೇಲಿ ಬಿಡಲಾಗಿದೆ ಹಾಗೂ ಅದು ನೇರವಾಗಿ ತಟ್ಟೆಗೆ ಬಂದು ಬಿದ್ದಿದೆ. ಸಖತ್​ ಡಿಫರೆಂಟ್​ ಆಗಿ ದೋಸೆಯನ್ನ ಬಡಿಸುವ ಈ ರೀತಿ ನಿಮಗೆ ಆಶ್ಚರ್ಯ ಉಂಟು ಮಾಡೋದ್ರಲ್ಲಿ ಸಂದೇಹವೇ ಇಲ್ಲ. ಅಂದಹಾಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

Flying Dosa 2.0 | Serving Dosa LIKE A BOSS

Serving Dosa LIKE A BOSS | Next Level Flying Dosa at Shree Balaji Dosa, Mangaldas Market, Mumbai

Posted by Street Food Recipes on Thursday, February 11, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...