alex Certify ಆಟೋರಿಕ್ಷಾ ಏರಿ ಬೆಚ್ಚಿಬೀಳಿಸಿದ ಅನಿರೀಕ್ಷಿತ ಅತಿಥಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋರಿಕ್ಷಾ ಏರಿ ಬೆಚ್ಚಿಬೀಳಿಸಿದ ಅನಿರೀಕ್ಷಿತ ಅತಿಥಿ…!

ಆತ ಬೆಳಗ್ಗೆ ತಮ್ಮ ಪಾಡಿಗೆ ತಾನು ಆಟೋ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ಕರೆಯದೇ ಬಂದ ಅತಿಥಿಯನ್ನು ನೋಡಿ ಶಾಕ್ ಆಗಿದ್ದಾನೆ. ಈ ಅತಿಥಿ ಯಾರು ಅಂದುಕೊಂಡ್ರಾ. ಇದು ಬೇರಾರು ಅಲ್ಲ ಐದು ಅಡಿ ಉದ್ದದ ಹೆಬ್ಬಾವು.

ಹೌದು, ಆಟೋರಿಕ್ಷಾ ಒಂದರಲ್ಲಿ ದೊಡ್ಡ ಹೆಬ್ಬಾವೊಂದು ಸೇರಿಕೊಂಡಿದೆ. ಈ ಘಟನೆ ನಡೆದಿರೋದು ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ. ಇಷ್ಟು ದೊಡ್ಡ ಹಾವು ನೋಡಿದ ಚಾಲಕ ಒಮ್ಮೆಲೆ ಬೆಚ್ಚಿ ಬಿದ್ದಿದ್ದಾನೆ. ಅದೃಷ್ಟವಶಾತ್ ಈ ಹಾವು ಆಟೋರಿಕ್ಷಾದಲ್ಲಿದ್ದಾಗ ಯಾವುದೇ ಪ್ರಯಾಣಿಕ ಇರಲಿಲ್ಲ.

ಇನ್ನು ಹಾವು ನೋಡಿದ ಚಾಲಕ ಕೂಡಲೇ ವೈಲ್ಡ್ ಲೈವ್ ಸೇವ್ ‌ದ ಲೈವ್ಸ್ ಎನ್‌ಜಿಒ ನಂಬರ್‌ಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅವರು ಹಾವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕರೆಯದೇ ಬಂದ ಅತಿಥಿಯಿಂದ ಕೆಲ ಕಾಲ ವಿಚಲಿತನಾಗಿದ್ದ ಆಟೋ ಚಾಲಕ ನಂತರ ನಿಟ್ಟುಸಿರು ಬಿಟ್ಟಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...