
ಆತ ಬೆಳಗ್ಗೆ ತಮ್ಮ ಪಾಡಿಗೆ ತಾನು ಆಟೋ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ಕರೆಯದೇ ಬಂದ ಅತಿಥಿಯನ್ನು ನೋಡಿ ಶಾಕ್ ಆಗಿದ್ದಾನೆ. ಈ ಅತಿಥಿ ಯಾರು ಅಂದುಕೊಂಡ್ರಾ. ಇದು ಬೇರಾರು ಅಲ್ಲ ಐದು ಅಡಿ ಉದ್ದದ ಹೆಬ್ಬಾವು.
ಹೌದು, ಆಟೋರಿಕ್ಷಾ ಒಂದರಲ್ಲಿ ದೊಡ್ಡ ಹೆಬ್ಬಾವೊಂದು ಸೇರಿಕೊಂಡಿದೆ. ಈ ಘಟನೆ ನಡೆದಿರೋದು ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ. ಇಷ್ಟು ದೊಡ್ಡ ಹಾವು ನೋಡಿದ ಚಾಲಕ ಒಮ್ಮೆಲೆ ಬೆಚ್ಚಿ ಬಿದ್ದಿದ್ದಾನೆ. ಅದೃಷ್ಟವಶಾತ್ ಈ ಹಾವು ಆಟೋರಿಕ್ಷಾದಲ್ಲಿದ್ದಾಗ ಯಾವುದೇ ಪ್ರಯಾಣಿಕ ಇರಲಿಲ್ಲ.
ಇನ್ನು ಹಾವು ನೋಡಿದ ಚಾಲಕ ಕೂಡಲೇ ವೈಲ್ಡ್ ಲೈವ್ ಸೇವ್ ದ ಲೈವ್ಸ್ ಎನ್‌ಜಿಒ ನಂಬರ್‌ಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅವರು ಹಾವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕರೆಯದೇ ಬಂದ ಅತಿಥಿಯಿಂದ ಕೆಲ ಕಾಲ ವಿಚಲಿತನಾಗಿದ್ದ ಆಟೋ ಚಾಲಕ ನಂತರ ನಿಟ್ಟುಸಿರು ಬಿಟ್ಟಿದ್ದಾನೆ.