
ಉತ್ತರ ಪ್ರದೇಶದ ಝಾನ್ಸಿಯ ಪಾರ್ಕ್ ಒಂದರಲ್ಲಿ ವ್ಯಾಯಾಮ ಮಾಡುವ ಉಪರಣವೊಂದು ತನ್ನಿಂತಾನೇ ಚಲಿಸುತ್ತಿರುವ ದೃಶ್ಯಾವಳಿಯೊಂದು ಅಂತರ್ಜಾಲದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಯಾರೂ ಬಳಸದೇ ಇದ್ದರೂ ಸಹ ಈ ಜಿಮ್ ಉಪಕರಣ ತಾನಾಗೆ ಚಲಿಸುತ್ತಿರುವುದನ್ನು ನೋಡಿ, ಯಾವುದೋ ದೆವ್ವ ಮೆಟ್ಟಿಕೊಂಡಿದೆ ಎಂದು ಜನರು ಭಾವಿಸಿದ್ದರು. ಇಲ್ಲಿನ ಕಾಶಿರಾಮ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಇಲ್ಲಿ ಯಾವುದೇ ದೆವ್ವವಿಲ್ಲ ಎಂದು ತಿಳಿಸಿರುವ ಪೊಲೀಸರು, ಯಾವುದೇ ವದಂತಿಗಳಿಗೆ ಕಿವಿಗೊಡದೇ ಶಾಂತಿಯುತವಾಗಿ ಇರಲು ಕೋರಿದ್ದಾರೆ.