ಕೊರೊನಾದಿಂದ ಕಂಗೆಟ್ಟಿರುವ ವಿಶ್ವದ ಎಲ್ಲ ರಾಷ್ಟ್ರಗಳು ಕೋವಿಡ್ ಲಸಿಕೆಗಾಗಿ ಕಾತುರದಿಂದ ಕಾಯುತ್ತಿವೆ. ಕಳೆದ ಎರಡು ವಾರಗಳಲ್ಲಿ ಉತ್ತಮ ಬೆಳವಣಿಗೆ ಎಂಬಂತೆ ಎರಡು ಫಾರ್ಮಾ ಕಂಪನಿಗಳಾದ ಮಾಡರ್ನಾ ಹಾಗೂ ಫೀಜರ್ ತಮ್ಮ ಲಸಿಕೆ ಬಳಸಿದ ಸೋಂಕಿತರು ಉತ್ತಮ ಪ್ರತಿಕ್ರಿಯೆ ತೋರಿಸಿದ್ದಾರೆ ಎಂದು ಹೇಳಿದೆ.
ಈ ಲಸಿಕೆಗಳಿಗೆ ಅನುಮೋದನೆ ಸಿಕ್ಕರೆ ವಿಶ್ವಕ್ಕೆ ಅಪ್ಪಳಿಸಿರುವ ಕೊರೊನಾ ವೈರಸ್ ಕೊನೆಗಾಣುತ್ತೆ ಎಂಬ ಭರವಸೆ ಜನರಲ್ಲಿ ಮೂಡಿದೆ. ಆದರೆ ಲಸಿಕೆ ಕಂಡು ಹಿಡಿದರಷ್ಟೇ ಸಾಲದು. ಲಸಿಕೆಗಳನ್ನ ಸಂಗ್ರಹಿಸಿಡಲು ಬೇಕಾದ ದುಬಾರಿ ತಂತ್ರಜ್ಞಾನಗಳನ್ನೂ ಭಾರತ ಅಳವಡಿಸಿಕೊಳ್ಳಬೇಕಿದೆ.
ಆದರೆ ಸಿರೋಸರ್ವೇ ಪ್ರಕಾರ ಭಾರತದಲ್ಲಿ ಲಸಿಕೆಗಿಂತ ಹೆಚ್ಚಾಗಿ ಪ್ರತಿಕಾಯಗಳ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರಂತೆ. ಪುಣೆಯ 5 ಕಡೆಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಸೋಂಕಿಗೆ ಒಳಗಾದವರಲ್ಲಿ ಸುಮಾರು 85 ಶೇಕಡಾದಷ್ಟು ಮಂದಿ ರಕ್ಷಣಾತ್ಮಕ ಪ್ರತಿಕಾಯಗಳನ್ನ ತಮ್ಮ ದೇಹದಲ್ಲಿ ಅಭಿವೃದ್ಧಿಪಡಿಸಿಕೊಂಡಿದ್ದಾರೆ.