ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡುವ ದಿನ ಸಮೀಪಿಸುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಮೊದಲ ಮಕ್ಕಳ ಸ್ನೇಹಿ ಕೋವಿಡ್ ಲಸಿಕಾ ಕೇಂದ್ರ ನಿರ್ಮಾಣವಾಗಿದೆ. ಇಲ್ಲಿ ಆಟಿಕೆ ಸಾಮಗ್ರಿ, ಎಲೆಕ್ಟ್ರಾನಿಕ್ ಹಾಗೂ ಸಂಗೀತ ಸಂಬಂಧಿ ವಸ್ತುಗಳನ್ನು ಇಡಲಾಗಿದೆ.
ವರುಣನ ಅವಾಂತರಕ್ಕೆ ತತ್ತರಿಸಿದ ಅನ್ನದಾತ…..! ಮಕ್ಕಳ ಮದುವೆಗೂ ಹಣವಿಲ್ಲದೆ ಪರದಾಟ
ಕೊರೊನಾ ಲಸಿಕೆಯನ್ನು ಸ್ವೀಕರಿಸಿದ ಬಳಿಕ ಮಕ್ಕಳು ಅಲ್ಲೇ ಕೂರಬೇಕಾದ ಸಂದರ್ಭದಲ್ಲಿ ಅವರಿಗೆ ಬೇಸರ ಬರಬಾರದು ಎಂಬ ವಿಚಾರವನ್ನು ಗಮನದಲ್ಲಿರಿಸಿ ಈ ಲಸಿಕಾ ಕೇಂದ್ರವನ್ನು ನಿರ್ಮಿಸಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಸ್ಟಾರ್ ಇಮೇಜಿಂಗ್ & ಪಾತ್ ಲ್ಯಾಬ್ಸ್ ನಿರ್ದೇಶಕ ಡಾ. ಸಮೀತ್ ಭಾಟಿ, ಕೊರೊನಾ ಲಸಿಕೆಯ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಬೇಸರ ಉಂಟಾಗಬಾರದು ಎಂಬ ವಿಚಾರವನ್ನು ಗಮನದಲ್ಲಿರಿಸಿ ಈ ರೀತಿಯ ಲಸಿಕಾ ಕೇಂದ್ರವನ್ನು ನಿರ್ಮಿಸಲಾಗಿದೆ. ಇಲ್ಲಿ ಮಕ್ಕಳು ಆಟವಾಡಬಹುದು. ಮಕ್ಕಳಿಗಾಗಿ ಎಲೆಕ್ಟ್ರಾನಿಕ್, ಸಂಗೀತ ಸಂಬಂಧಿ ಸೇರಿಂತೆ ಸಾಕಷ್ಟು ಆಟಿಕೆ ಸಾಮಗ್ರಿಗಳನ್ನು ಇರಿಸಿದ್ದೇವೆ. ಹೀಗಾಗಿ ಕೊರೊನಾ ಲಸಿಕೆಯ ಅವಧಿಯಲ್ಲಿ ಮಕ್ಕಳಿಗೆ ಯಾವುದೇ ಬೇಸರ ಉಂಟಾಗುವುದಿಲ್ಲ ಎಂದು ಹೇಳಿದ್ರು.
8 ವರ್ಷದ ಹಿಂದೆ ಸಲ್ಲಿಸಿದ್ದ ಕೆಲಸದ ಅರ್ಜಿಗೆ ಈಗ ಬಂತು ಉತ್ತರ…..!
ಈ ಹಿಂದೆ ನಾವು ವಯಸ್ಕರಿಗೆ ಲಸಿಕಾ ಕೇಂದ್ರವನ್ನು ನಿರ್ಮಿಸಿದ್ದೇವೆ. ಆದರೆ ಇದು ಕೇವಲ ಮಕ್ಕಳ ಮನಸ್ಥಿತಿಯನ್ನೇ ಗಮನದಲ್ಲಿರಿಸಿ ನಿರ್ಮಿಸಿದ ಲಸಿಕಾ ಕೇಂದ್ರವಾಗಿದೆ. ಈ ರೀತಿಯ ಲಸಿಕಾ ಕೇಂದ್ರಗಳ ಅವಶ್ಯಕತೆ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಬೇಕಾದರೆ ನಾವು ನಿರ್ಮಿಸಿಕೊಡುತ್ತೇವೆ ಎಂದು ಹೇಳಿದ್ರು.