ಮೋಝಿಲ್ಲಾ ಫೈರ್ಫಾಕ್ಸ್ ಸರ್ಚಿಂಗ್ ಸೈಟ್ನಲ್ಲಿ ಟ್ವಿಟರ್ ಬಳಕೆಗೆ ತೊಂದರೆಯಾಗ್ತಿದೆ ಎಂದಿದ್ದ ಗ್ರಾಹಕರ ಸಮಸ್ಯೆಯನ್ನ ಮೋಝಿಲ್ಲಾ ಸುಧಾರಣೆ ಮಾಡಿದೆ. ಫೈರ್ಫಾಕ್ಸ್ 81. 0. 2 ವರ್ಷನ್ನ್ನು ಬಿಡುಗಡೆ ಮಾಡಿರೋ ಫೈರ್ ಫಾಕ್ಸ್ ಈ ಮೂಲಕ ತನ್ನ ಗ್ರಾಹಕರ ಸಮಸ್ಯೆಯನ್ನ ಬಗೆಹರಿಸಿದೆ.
ಈ ಹಿಂದಿನ ಮೋಜಿಲ್ಲಾ ವರ್ಷನ್ನಲ್ಲಿ ಟ್ವಿಟರ್ ಬಳಕೆ ಕಷ್ಟವಾಗ್ತಿತ್ತು. ಟ್ವಿಟರ್ ಅಕೌಂಟ್ ಓಪನ್ ಮಾಡಲು ಹೋದರೆ ಎರರ್ ಎಂದು ಕಾಣಿಸ್ತಿತ್ತು. ಇಲ್ಲವೇ ಈ ಪೇಜ್ನಲ್ಲಿ ತಾತ್ಕಾಲಿಕ ತೊಂದರೆ ಇದೆ ಅಂತಾ ನೋಟಿಫಿಕೇಷನ್ ತೋರಿಸಲಾಗ್ತಾ ಇತ್ತು. ಆದ್ರೆ ಹೊಸ ವರ್ಷನ್ನ್ನು ರಿಲೀಸ್ ಮಾಡಿರೋ ಮೋಜಿಲ್ಲಾ ಈ ಎಲ್ಲ ಸಮಸ್ಯೆಗಳನ್ನ ಸಾಲ್ವ್ ಮಾಡಿದೆ.
ಅಲ್ಲದೇ ಈ ನೂತನ ವರ್ಷನ್ ಲಿನಕ್ಸ್, ಆಂಡ್ರಾಯ್ಡ್, ವಿಂಡೋಸ್ ಸೇರಿದಂತೆ ಎಲ್ಲಾ ಚಾನೆಲ್ಗಳಿಗೆ ಸೂಟ್ ಆಗುತ್ತೆ ಅಂತಾನೂ ಹೇಳಿದೆ.