ದೆಹಲಿ ಶ್ರೀರಾಮ ಮಹಿಳಾ ಕಾಲೇಜು ವಿದ್ಯಾರ್ಥಿನಿ ತೆಲಂಗಾಣದ ತನ್ನ ಊರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಡೆತ್ ನೋಟ್ನಲ್ಲಿ ಆರ್ಥಿಕ ಸಂಕಷ್ಟವೇ ನನ್ನ ಸಾವಿಗೆ ಕಾರಣ ಅಂತಾ ಬರೆದಿದ್ದಾಳೆ.
ಐಶ್ವರ್ಯ ರೆಡ್ಡಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು ನವೆಂಬರ್ 2ರಂದು ರಂಗಾರೆಡ್ಡಿ ಜಿಲ್ಲೆಯ ಶಾದ್ನಗರದಲ್ಲಿರುವ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ. ಈಕೆಯ ಡೆತ್ನೋಟ್ ಪೊಲೀಸರ ಕೈಗೆ ಸಿಕ್ಕಿದ್ದು, ಇದರಲ್ಲಿ ಆಕೆ ತನಗೆ ಐಎಎಸ್ ಆಫಿಸರ್ ಆಗುವ ಕನಸಿದೆ. ಆದರೆ ನಾನು ನನ್ನ ಕುಟುಂಬಕ್ಕೆ ಹೊರೆಯಾಗಬಯಸಲ್ಲ ಎಂದು ಬರೆದಿದ್ದಾಳೆ.
ಮೆಕಾನಿಕ್ ಶ್ರೀನಿವಾಸ್ ರೆಡ್ಡಿ ಹಾಗೂ ಸುಮತಿ ಎಂಬವರ ಪುತ್ರಿಯಾಗಿದ್ದ ಐಶ್ವರ್ಯರನ್ನ ಹಣ ಕಟ್ಟಲು ಆಗದ ಕಾರಣ ಹಾಸ್ಟೆಲ್ ಖಾಲಿ ಮಾಡುವಂತೆ ಹೇಳಲಾಗಿತ್ತು. ಕಡು ಬಡತನದ ಕುಟುಂಬದ ಐಶ್ವರ್ಯ ಟಾಪರ್ ಆಗಿದ್ರೂ ಸಹ ಓದಲು ಆರ್ಥಿಕ ಬೆಂಬಲವಿಲ್ಲದ ಹಿನ್ನೆಲೆ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ.