alex Certify ಸಾಮಾಜಿಕ ಜಾಲತಾಣದ ನೆರವಿನಿಂದ ಹೊಸ ಬದುಕು ಪಡೆದ ಅನಾಥ ಬಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಜಾಲತಾಣದ ನೆರವಿನಿಂದ ಹೊಸ ಬದುಕು ಪಡೆದ ಅನಾಥ ಬಾಲಕ..!

ಉತ್ತರ ಪ್ರದೇಶದ ಮುಜಾಫರ್​ ನಗರದಲ್ಲಿ ಪುಟ್ಟ ಹುಡುಗನೊಬ್ಬ ನಾಯಿಯ ಜೊತೆ ಫುಟ್​ಪಾತ್​​ನಲ್ಲಿ ಮಲಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಂಕಿತ್​ ಎಂದು ಗುರುತಿಸಲ್ಪಟ್ಟಿರುವ ಈ ಹುಡುಗನಿಗೆ ತನ್ನ ತಂದೆ ಜೈಲಿನಲ್ಲಿದ್ದಾನೆ ಹಾಗೂ ತಾಯಿ ತನ್ನನ್ನ ಬಿಟ್ಟು ಹೋಗಿದ್ದಾಳೆ ಅನ್ನೋದಷ್ಟರ ಹೊರತು ಮತ್ಯಾವ ವಿಚಾರವೂ ಆತನಿಗೆ ತಿಳಿದಿಲ್ಲ. ಡ್ಯಾನಿ ಎಂಬ ಶ್ವಾನದ ಜೊತೆ ಇರುವ ಈ ಬಾಲಕ ಜೀವನೋಪಾಯಕ್ಕಾಗಿ ಚಹ ಹಾಗೂ ಬಲೂನುಗಳನ್ನ ಮಾರಾಟ ಮಾಡುತ್ತಿದ್ದನಂತೆ.

ಫುಟ್​​ಪಾತ್​ ಮೇಲೆ ಕಂಬಳಿ ಹೊದ್ದು ಅಂಕಿತ್​ ಹಾಗೂ ಡ್ಯಾನಿ ಶ್ವಾನ ಮಲಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಫೋಟೋ ವೈರಲ್​ ಆಗುತ್ತಿದ್ದಂತೆ ಮುಜಾಫುರ್​ ನಗರ ಎಸ್​ಎಸ್​ಪಿ ಅಭಿಷೇಕ್​ ಯಾದವ್ ಬಾಲಕನನ್ನ ಹುಡುಕುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದರು.

ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಅಂಕಿತ್​​ನನ್ನ ಪತ್ತೆ ಮಾಡಿದ್ದಾರೆ. ಜಿಲ್ಲಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ ಈತನ ಬಗ್ಗೆ ಮಾಹಿತಿ ನೀಡಲಾಗಿದ್ದು ಅಂಕಿತ್​ನ ಕುಟುಂಬಸ್ಥರ ಹುಡುಕಾಟಕ್ಕೂ ಪೊಲೀಸರು ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...