ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಪುಟ್ಟ ಹುಡುಗನೊಬ್ಬ ನಾಯಿಯ ಜೊತೆ ಫುಟ್ಪಾತ್ನಲ್ಲಿ ಮಲಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂಕಿತ್ ಎಂದು ಗುರುತಿಸಲ್ಪಟ್ಟಿರುವ ಈ ಹುಡುಗನಿಗೆ ತನ್ನ ತಂದೆ ಜೈಲಿನಲ್ಲಿದ್ದಾನೆ ಹಾಗೂ ತಾಯಿ ತನ್ನನ್ನ ಬಿಟ್ಟು ಹೋಗಿದ್ದಾಳೆ ಅನ್ನೋದಷ್ಟರ ಹೊರತು ಮತ್ಯಾವ ವಿಚಾರವೂ ಆತನಿಗೆ ತಿಳಿದಿಲ್ಲ. ಡ್ಯಾನಿ ಎಂಬ ಶ್ವಾನದ ಜೊತೆ ಇರುವ ಈ ಬಾಲಕ ಜೀವನೋಪಾಯಕ್ಕಾಗಿ ಚಹ ಹಾಗೂ ಬಲೂನುಗಳನ್ನ ಮಾರಾಟ ಮಾಡುತ್ತಿದ್ದನಂತೆ.
ಫುಟ್ಪಾತ್ ಮೇಲೆ ಕಂಬಳಿ ಹೊದ್ದು ಅಂಕಿತ್ ಹಾಗೂ ಡ್ಯಾನಿ ಶ್ವಾನ ಮಲಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಫೋಟೋ ವೈರಲ್ ಆಗುತ್ತಿದ್ದಂತೆ ಮುಜಾಫುರ್ ನಗರ ಎಸ್ಎಸ್ಪಿ ಅಭಿಷೇಕ್ ಯಾದವ್ ಬಾಲಕನನ್ನ ಹುಡುಕುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದರು.
ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಅಂಕಿತ್ನನ್ನ ಪತ್ತೆ ಮಾಡಿದ್ದಾರೆ. ಜಿಲ್ಲಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ ಈತನ ಬಗ್ಗೆ ಮಾಹಿತಿ ನೀಡಲಾಗಿದ್ದು ಅಂಕಿತ್ನ ಕುಟುಂಬಸ್ಥರ ಹುಡುಕಾಟಕ್ಕೂ ಪೊಲೀಸರು ಮುಂದಾಗಿದ್ದಾರೆ.