alex Certify ಜಲಫಿರಂಗಿ ಬಂದ್​ ಮಾಡಿದ್ದ ರೈತ ಹೋರಾಟಗಾರನ ವಿರುದ್ಧ ಕೊಲೆ ಯತ್ನ ಕೇಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಲಫಿರಂಗಿ ಬಂದ್​ ಮಾಡಿದ್ದ ರೈತ ಹೋರಾಟಗಾರನ ವಿರುದ್ಧ ಕೊಲೆ ಯತ್ನ ಕೇಸ್​..!

ಕೃಷಿ ಮಸೂದೆಯನ್ನ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ದೆಹಲಿ ಚಲೋ ರ್ಯಾಲಿ ವೇಳೆ ಪೊಲೀಸರು ಪ್ರಯೋಗಿಸಿದ್ದ ಜಲಫಿರಂಗಿಯನ್ನ ಸಿನಿಮೀಯ ರೀತಿಯಲ್ಲಿ ಬಂದ್​ ಮಾಡುವ ಮೂಲಕ ಹರಿಯಾಣದ ಯುವ ಹೋರಾಟಗಾರ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇದೀಗ ಅಂಬಾಲಾದ ಈ ಯುವ ಹೋರಾಟಗಾರನ ವಿರುದ್ಧ ಕೊಲೆಗೆ ಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.

26 ವರ್ಷದ ನವದೀಪ್​ ಸಿಂಗ್​ ಎಂಬವರು ವಾಟರ್​ ಕ್ಯಾನೋನ್​ನ್ನು ಹತ್ತಿ ರೈತರ ಮೇಲೆ ಬೀಳುತ್ತಿದ್ದ ಜಲಫಿರಂಗಿಯನ್ನ ನಿಲ್ಲಿಸಿದ್ದರು. ಬುಧವಾರ ನಡೆದಿದ್ದ ಈ ಘಟನೆ ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿ ಮಾಡಿತ್ತು. ಇದೀಗ ಈ ಯುವಕನ ವಿರುದ್ಧ ಕೊಲೆಗೆ ಯತ್ನ ಆರೋಪ ಹೊರಿಸಲಾಗಿದೆ. ಹಾಗೂ ಕೋವಿಡ್​ 19 ನಿಯಮಾವಳಿ ಉಲ್ಲಂಘನೆ ಆರೋಪವೂ ಇದರಲ್ಲಿ ಸೇರಿದೆ.

ನನ್ನ ಓದಿನ ಬಳಿಕ ರೈತ ಪರ ಹೋರಾಟಗಾರರಾದ ನನ್ನ ತಂದೆ ಜೊತೆ ವ್ಯವಸಾಯ ಮಾಡಲು ಆರಂಭಿಸಿದ್ದೆ. ನಾನೆಂದಿಗೂ ಅಕ್ರಮದ ಕೆಲಸವನ್ನ ಮಾಡಿಯೇ ಇಲ್ಲ. ಜಲಫಿರಂಗಿಯಿಂದ ರೈತರಿಗೆ ತೊಂದರೆಯುಂಟಾಗುತ್ತಿತ್ತು. ಹೀಗಾಗಿ ನಾನು ಅದನ್ನ ಬಂದ್​ ಮಾಡಿದೆ ಅಂತಾ ನವದೀಪ್​ ಸಿಂಗ್​ ಹೇಳಿದ್ದಾರೆ.

— Ranjan Mistry (@mistryofficial) November 27, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...