ಕೃಷಿ ಮಸೂದೆಯನ್ನ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ದೆಹಲಿ ಚಲೋ ರ್ಯಾಲಿ ವೇಳೆ ಪೊಲೀಸರು ಪ್ರಯೋಗಿಸಿದ್ದ ಜಲಫಿರಂಗಿಯನ್ನ ಸಿನಿಮೀಯ ರೀತಿಯಲ್ಲಿ ಬಂದ್ ಮಾಡುವ ಮೂಲಕ ಹರಿಯಾಣದ ಯುವ ಹೋರಾಟಗಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇದೀಗ ಅಂಬಾಲಾದ ಈ ಯುವ ಹೋರಾಟಗಾರನ ವಿರುದ್ಧ ಕೊಲೆಗೆ ಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.
26 ವರ್ಷದ ನವದೀಪ್ ಸಿಂಗ್ ಎಂಬವರು ವಾಟರ್ ಕ್ಯಾನೋನ್ನ್ನು ಹತ್ತಿ ರೈತರ ಮೇಲೆ ಬೀಳುತ್ತಿದ್ದ ಜಲಫಿರಂಗಿಯನ್ನ ನಿಲ್ಲಿಸಿದ್ದರು. ಬುಧವಾರ ನಡೆದಿದ್ದ ಈ ಘಟನೆ ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿ ಮಾಡಿತ್ತು. ಇದೀಗ ಈ ಯುವಕನ ವಿರುದ್ಧ ಕೊಲೆಗೆ ಯತ್ನ ಆರೋಪ ಹೊರಿಸಲಾಗಿದೆ. ಹಾಗೂ ಕೋವಿಡ್ 19 ನಿಯಮಾವಳಿ ಉಲ್ಲಂಘನೆ ಆರೋಪವೂ ಇದರಲ್ಲಿ ಸೇರಿದೆ.
ನನ್ನ ಓದಿನ ಬಳಿಕ ರೈತ ಪರ ಹೋರಾಟಗಾರರಾದ ನನ್ನ ತಂದೆ ಜೊತೆ ವ್ಯವಸಾಯ ಮಾಡಲು ಆರಂಭಿಸಿದ್ದೆ. ನಾನೆಂದಿಗೂ ಅಕ್ರಮದ ಕೆಲಸವನ್ನ ಮಾಡಿಯೇ ಇಲ್ಲ. ಜಲಫಿರಂಗಿಯಿಂದ ರೈತರಿಗೆ ತೊಂದರೆಯುಂಟಾಗುತ್ತಿತ್ತು. ಹೀಗಾಗಿ ನಾನು ಅದನ್ನ ಬಂದ್ ಮಾಡಿದೆ ಅಂತಾ ನವದೀಪ್ ಸಿಂಗ್ ಹೇಳಿದ್ದಾರೆ.
https://twitter.com/mistryofficial/status/1332198540693553154