ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣ ಹಾಗೂ ಪಂಜಾಬ್ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಂದಾಗಿ ಟೋಲ್ ಸಂಗ್ರಹಕ್ಕೆ ಬರೋಬ್ಬರಿ 600 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.
ವಾಹನ ಸಂಚಾರದಲ್ಲಿನ ನಿರ್ಬಂಧಗಳಿಂದಾಗಿ ಟೋಲ್ ಸಂಗ್ರಹದ ಮೇಲಿನ ಪರಿಣಾಮದ ಹೊರತಾಗಿ, ಮಧ್ಯಸ್ಥಗಾರರು ತೆಗೆದುಕೊಂಡ 9,300 ಕೋಟಿ ರೂ.ಗಳ ಸಾಲವೂ ಅಪಾಯದಲ್ಲಿದೆ ಎಂದು ರೇಟಿಂಗ್ ಏಜೆನ್ಸಿ ಇಕ್ರಾ ವರದಿಯಲ್ಲಿ ತಿಳಿಸಿದೆ.
1.8 ಲಕ್ಷ ರೂ. ಹೂಡಿಕೆಯಲ್ಲಿ ಶುರುಮಾಡಿ ಲಾಭಕರ ಬ್ಯುಸಿನೆಸ್
ಕೇಂದ್ರ ಸರ್ಕಾರ ಹೊಸ ಕೃಷಿ ಕಾನೂನನ್ನ ರದ್ದು ಮಾಡಬೇಕೆಂದು ಆಗ್ರಹಿಸಿ ಉತ್ತರ ಭಾರತದಲ್ಲಿ ರೈತರು 2 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.
ಫೆಬ್ರವರಿ ವೇಳೆಗೆ ಪ್ರತಿಭಟನೆ ಕಡಿಮೆಯಾಗುತ್ತೆ ಎಂದು ಊಹಿಸಿದ್ರೆ ಈ ಪ್ರತಿಭಟನೆಯು 2020-21ನೇ ಸಾಲಿನಲ್ಲಿ ಟೋಲ್ ಸಂಗ್ರಹದಲ್ಲಿ 30-35 ಪ್ರತಿಶತ ಕುಸಿತಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಸಂಘರ್ಷದ ಬೆನ್ನಲ್ಲೇ ಧರಣಿ ಸ್ಥಳಕ್ಕೆ ರೈತರ ದೌಡು, ಸಿಂಘು ಗಡಿಯತ್ತ ಸಾವಿರಾರು ರೈತರ ಲಗ್ಗೆ
ಕೊರೊನಾ ಕಾರಣದಿಂದಾಗಿ ದೇಶದ ಇತರೆ ಭಾಗಗಳಲ್ಲಿ ಶೇಕಡಾ 5-7ರಷ್ಟು ಟೋಲ್ ಕುಸಿತ ಕಂಡಿದೆ.