
ಪುಣೆ ಜಂಕ್ಷನ್ ಈಗ ಅದಾನಿ ಗ್ರೂಪ್ ಒಡೆತನಕ್ಕೆ ಸೇರಿದೆ ಎಂಬರ್ಥವನ್ನ ಈ ಟಿಕೆಟ್ ಹೊಂದಿದೆ. ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಸಾರ್ವಜನಿಕ ವಲಯದ ಘಟಕಗಳನ್ನ ಖಾಸಗೀಕರಣ ಮಾಡಿದೆ. ಹೀಗಾಗಿ ರೈಲ್ವೆ ಇಲಾಖೆ ಕೂಡ ಖಾಸಗಿಕರಣವಾಗುತ್ತಾ ಎಂಬ ಪ್ರಶ್ನೆ ಈ ಟಿಕೆಟ್ ಫೋಟೋ ನೋಡಿದ ಅನೇಕರಲ್ಲಿ ಮೂಡಿತ್ತು.
ಎಂ.ಎಂ. ವರ್ಮಾ ಎಂಬವರು ಶನಿವಾರ ಅಂದರೆ ಡಿಸೆಂಬರ್ 26ರಂದು ಈ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ಪೋಸ್ಟ್ ನೋಡಿದ ಅನೇಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನ ಹೊರಹಾಕಿದ್ದರು.
ಆದರೆ ಇದೀಗ ಈ ಟಿಕೆಟ್ನ ಅಸಲಿ ಬಣ್ಣ ಫ್ಯಾಕ್ಟ್ ಚೆಕ್ನಲ್ಲಿ ಬಯಲಾಗಿದೆ. 2020ರ ಸೆಪ್ಟೆಂಬರ್ 11ರಂದು ಪತ್ರಕರ್ತ ಪ್ರಶಾಂತ್ ಕನೋಜಿಯಾ ಎಂಬವರು ಪುಣೆ ಫ್ಲಾಟ್ಫಾರಂನ ಟಿಕೆಟ್ ಫೋಟೋ ಶೇರ್ ಮಾಡೋದ್ರ ಮೂಲಕ ಬೆಲೆ ಏರಿಕೆಯನ್ನ ಖಂಡಿಸಿದ್ದರು. ಇದಕ್ಕೆ ರಿ ಟ್ವೀಟ್ ಮಾಡಿದ ಭಾರತೀಯ ರೇಲ್ವೆ ಇಲಾಖೆ ವಕ್ತಾರ ಬೆಲೆ ಏರಿಕೆಗೆ ಕಾರಣವನ್ನೂ ನೀಡಿದ್ದರು. ಇದೇ ಟಿಕೆಟ್ನ ಫೋಟೋವನ್ನ ಎಡಿಟ್ ಮಾಡಿ ಅದಕ್ಕೆ ಅದಾನಿ ಗ್ರೂಪ್ ಎಂದು ಬರೆಯುವ ಮೂಲಕ ಸುಳ್ಳು ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ ಎಂಬ ಅಂಶ ಫ್ಯಾಕ್ಟ್ ಚೆಕ್ನಲ್ಲಿ ಬೆಳಕಿಗೆ ಬಂದಿದೆ.
— Scharada Dubey (@scharada_d) August 17, 2020