ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕೆ ಅಮೆರಿಕನ್ನರಷ್ಟೇ ಭಾರತೀಯರು ಸಹ ಕಾತುರರಾಗಿದ್ದು ಎಲ್ಲರಿಗೂ ತಿಳಿದಿರೋ ವಿಚಾರ. ಇದೀಗ ರಿಸಲ್ಪ್ ಕೂಡ ಹೊರಬಂದಿದ್ದು ಪ್ರಮಾಣ ವಚನ ಸಮಾರಂಭಕ್ಕೆ ಶ್ವೇತ ಭವನದಲ್ಲಿ ಸಿದ್ಧತೆ ಜೋರಾಗಿದೆ.
ಆದರೆ ಪ್ರಮಾಣ ವಚನ ಸಮಾರಂಭಕ್ಕೆ ಭಾರತದ ಯಾವ ಗಣ್ಯರಿಗೆ ಆಹ್ವಾನ ನೀಡಲಾಗುತ್ತೆ ಅನ್ನೋ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
ಜನವರಿ 20ರೊಳಗೆ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ರಿಗೂ ಆಹ್ವಾನ ನೀಡಲಾಗಿದೆ ಎಂಬ ಸುದ್ದಿ ಟ್ವಿಟರ್ನಲ್ಲಿ ಹರಿದಾಡ್ತಿದೆ.
ಅಮೆರಿಕಾ ಅಧ್ಯಕ್ಷರ ಪದಗ್ರಹಣ ಸಮಾರಂಭ ಬಹಳ ಅದ್ಧೂರಿಯಾಗಿ ನಡೆಯುತ್ತೆ. ಆದರೆ ಈ ಬಾರಿ ಕರೊನಾ ವೈರಸ್ ನ್ನೂ ಗಮನದಲ್ಲಿಟ್ಟುಕ್ಕೊಂಡು ಸಮಾರಂಭವನ್ನ ಆಚರಿಸಬೇಕಾದ ಅನಿರ್ವಾಯತೆ ಇದೆ.
ಅಮೆರಿಕ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಯಾರ್ಯಾರು ಬರಬೇಕು ಅನ್ನೋ ಪಟ್ಟಿಯನ್ನ ಮೊದಲೇ ಸಿದ್ಧಪಡಿಸಲಾಗುತ್ತೆ . ಆದರೆ ಈ ಬಾರಿಯ ಕಾರ್ಯಕ್ರಮಕ್ಕೆ ಆಹ್ವಾನಿತರ ಪಟ್ಟಿ ಇನ್ನೂ ಸಿದ್ದವಾಗಿಲ್ಲ. ಹೀಗಾಗಿ ಮನಮೋಹನ್ ಸಿಂಗ್ಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂಬ ಸುದ್ದಿ ಸುಳ್ಳು ಅನ್ನೋದು ಫ್ಯಾಕ್ಟ್ ಚೆಕ್ನಲ್ಲಿ ಬಯಲಾಗಿದೆ.
https://twitter.com/NawazKhaki/status/1325513945935867905