
ಕೃಷಿ ಮಸೂದೆ ವಿರೋಧಿಸಿ ರೈತರ ಹೋರಾಟವನ್ನ ಬೆಂಬಲಿಸಿ ಈ ಖಾತೆಯಲ್ಲಿ ಪೋಸ್ಟ್ಗಳನ್ನ ಶೇರ್ ಮಾಡಲಾಗುತ್ತಿತ್ತು. ಆದರೆ ಈ ಖಾತೆ ಸಮಾಜಕ್ಕೆ ವಿರೋಧವಾಗಿದೆ ಎಂದು ಆರೋಪಿಸಿ ಫೇಸ್ಬುಕ್ ಈ ಖಾತೆಯನ್ನ ಅಳಿಸಿಹಾಕಿತ್ತು.
ಇದರ ಸ್ಕ್ರೀನ್ಶಾಟ್ಗಳನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ ರೈತ ಬೆಂಬಲಿಗರು ಫೇಸ್ಬುಕ್ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸಾಕಷ್ಟು ವಿರೋಧ ಹಾಗೂ ಟೀಕೆಗಳನ್ನ ಎದುರಿಸಿದ ಬಳಿಕ ಫೇಸ್ಬುಕ್ ಸಂಸ್ಥೆ ಇದೀಗ ಈ ಖಾತೆಯನ್ನ ಮರು ಸ್ಥಾಪಿಸಿದೆ.