ರಾಜಸ್ಥಾನದಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ, ಪತಿ ಹತ್ಯೆ ಮಾಡಿ ಸಿಕ್ಕಿಬಿದ್ದಿದ್ದಾಳೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. 37 ವರ್ಷದ ಆತನ ಪತ್ನಿಯನ್ನು ಆಕೆಯ ಇಬ್ಬರು ಪ್ರೇಮಿಗಳೊಂದಿಗೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಜರೀನಾ ಬಾನೊ ತನ್ನ ಇಬ್ಬರು ಸಂಬಂಧಿಗಳಾದ ಅಲಾವುದ್ದೀನ್ ಖಾನ್ ಮತ್ತು ಬರ್ಕತ್ ಖಾನ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಮೂವರು ಒಂದು ತಿಂಗಳ ಹಿಂದೆ ಜರೀನಾ ಪತಿ ಯೂಸುಬ್ ಖಾನ್ ನನ್ನು ಕೊಲ್ಲಲು ಸಂಚು ರೂಪಿಸಿದ್ದರು. ಪೊಲೀಸರ ಪ್ರಕಾರ, ಅಲಾವುದ್ದೀನ್ ಖಾನ್ ಮತ್ತು ಬರ್ಕತ್ ಖಾನ್ ಆಗಸ್ಟ್ ಒಂದರ ಮಧ್ಯರಾತ್ರಿ ಯೂಸುಬ್ ಖಾನ್ ನನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾರೆ. ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ ಮೃತ ದೇಹವನ್ನು ಕಾಮಾಕ್ಷಿ ಕಾಲೇಜಿನ ಬಳಿ ಎಸೆದು ಹೋಗಿದ್ದಾರೆ.
ಅತ್ಯಾಚಾರದ ಆರೋಪ ಮಾಡಿದ್ದ ಬಾಂಗ್ಲಾ ನಟಿ ಅರೆಸ್ಟ್
ತನಿಖೆ ವೇಳೆ ಅಲಾವುದ್ದೀನ್ ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಮಾದಕ ವ್ಯಸನಿಯಾಗಿದ್ದ ಯೂಸುಬ್, ಪ್ರತಿ ದಿನ ಪತ್ನಿಗೆ ಹೊಡೆಯುತ್ತಿದ್ದನಂತೆ. ಈ ಸಂದರ್ಭದಲ್ಲಿ ಬರ್ಕತ್ ಖಾನ್ ಗೆ ಹತ್ತಿರವಾದ ಯೂಸುಬ್ ಪತ್ನಿ ಅಕ್ರಮ ಸಂಬಂಧ ಬೆಳೆಸಿದ್ದಳು. ಇದು ಗೊತ್ತಾಗ್ತಿದ್ದಂತೆ ಅಲ್ಲಾವುದ್ದೀನ್ ಖಾನ್ ಕೂಡ ಜರೀನಾ ಹತ್ತಿರವಾಗಿದ್ದ.