alex Certify ಅತ್ಯಾಚಾರದ ಆರೋಪ ಮಾಡಿದ್ದ‌ ಬಾಂಗ್ಲಾ ನಟಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರದ ಆರೋಪ ಮಾಡಿದ್ದ‌ ಬಾಂಗ್ಲಾ ನಟಿ ಅರೆಸ್ಟ್

ಬಾಂಗ್ಲಾದೇಶದ ಪ್ರಸಿದ್ಧ ನಟಿ ಪೋರಿ ಮೋನಿ 2 ತಿಂಗಳ ಹಿಂದಷ್ಟೇ ಬೋಟ್​ ಕ್ಲಬ್​ನಲ್ಲಿ ತಮ್ಮ ಮೇಲೆ ಲೈಂಗಿಕ ಕಿರಕುಳ ನಡೆದಿದೆ ಎಂದು ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಇದೇ ನಟಿಯನ್ನು ರ್ಯಾಪಿಡ್​ ಆ್ಯಕ್ಷನ್​ ಬೆಟಾಲಿಯನ್​ ಪೊಲೀಸರು ಬಂಧಿಸಿದ್ದಾರೆ.

ಢಾಕಾದ ಬನಾನಿಯಲ್ಲಿರುವ ಪೋರಿ ಮೋನಿ ನಿವಾಸದಲ್ಲಿ 4 ಗಂಟೆಗಳ ಕಾಲ ತಲಾಶ್​ ನಡೆಸಿದ ಪೊಲೀಸರು ರಾತ್ರಿ 9 ಗಂಟೆ ಸುಮಾರಿಗೆ ಈಕೆಯನ್ನು ಹೆಡ್​ಕ್ವಾಟ್ರರ್ಸ್​ಗೆ ಕರೆತಂದಿದ್ದಾರೆ. ಈಕೆಯ ನಿವಾಸದಲ್ಲಿ ಡ್ರಗ್​ ಹಾಗೂ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರ್​ಎಬಿ ಮಾಹಿತಿ ನೀಡಿದೆ.

ಕಂಚಿನ ಪದಕ ಕೈ ತಪ್ಪಿದರೂ ಇತಿಹಾಸ ರಚಿಸಿದ ಮಹಿಳಾ ಹಾಕಿ ತಂಡ

ಪೋರಿ ಪೋನಿ ಎಂದೇ ಖ್ಯಾತಿ ಗಳಿಸಿರುವ ಶಮಸುನ್ನಾಹರ್​​ ಸ್ಮೃತಿ ಜೂನ್​ 8ನೇ ತಾರೀಖಿನಂದು ತಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಆರೋಪ ಮಾಡಿದ್ದರು. ಬೋಟ್​ ಕ್ಲಬ್​​ನ ಮಾಜಿ ಅಧ್ಯಕ್ಷ ಹಾಗೂ ಗುಲ್ಶನ್​​ ಆಲ್​ ಕಮ್ಯೂನಿಟಿ ಕ್ಲಬ್​ ನಿರ್ದೇಶಕ, ಉದ್ಯಮಿ ಮತ್ತು ರಾಜಕಾರಣಿ ನಾಸಿರ್​ ಉದ್ದೀನ್​ ಮೊಹಮ್ಮದ್​ ವಿರುದ್ಧ ಪೋರಿ ಪೋನಿ ಈ ಆರೋಪ ಮಾಡಿದ್ದರು.

ಆದರೆ ಆರೋಪಿಯು ಬಾಂಗ್ಲಾದೇಶದ ಪೊಲೀಸ್​ ಇನ್​ಪೆಕ್ಟರ್​ ಜನರಲ್​ ಬೆನಜೀರ್​ ಅಹ್ಮದ್​ರ ಆಪ್ತ ಸ್ನೇಹಿತನಾದ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಿಸುವಲ್ಲಿ ಪೋರಿ ಪೋನಿ ವಿಫಲರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...