ಕೋಮು ಸೌಹಾರ್ದತೆ ಸಾರುವ ನಿದರ್ಶನವೊಂದರಲ್ಲಿ, ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಮುಸ್ಲಿಮರು ಅಮೃತಸರದ ಹರ್ಮಂದಿರ್ ಸಾಹಿಬ್ ಗುರುದ್ವಾರಾದ ಲಂಗರ್‌ಗೆ 330 ಕ್ವಿಂಟಾಲ್ ನಷ್ಟು ಗೋಧಿಯನ್ನು ನೀಡಿದ್ದಾರೆ.
ಸಿಖ್-ಮುಸ್ಲಿಂ ಸಂಝಾ ಮಂಚ್‌ನ ಅಧ್ಯಕ್ಷ ನಿಸಾರ್ ಅಖ್ತರ್ ನೇತೃತ್ವದ ನಿಯೋಗವು ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ಗೋಧಿಯನ್ನು ಹಸ್ತಾಂತರಿಸಿದೆ. ಈ ನಿಯೋಗವು ಅಕಾಲ್ ತಕ್ತ್‌ಗೆ ಭೇಟಿ ನೀಡಿದ ಸಂದರ್ಭದ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮನದುಂಬಿ ಶ್ಲಾಘಿಸಿದ್ದಾರೆ.
ಇದೇ ರೀತಿಯ ಕೋಮು ಸೌಹಾರ್ದತೆ ಎಲ್ಲೆಡೆ ನೆಲೆಸಲಿ ಎಂದು ಸಾಕಷ್ಟು ಮಂದಿ ಟ್ವಿಟರ್‌ನಲ್ಲಿ ಹಾಕಲಾದ ಈ ಪೋಸ್ಟ್‌ಗೆ ಕಾಮೆಂಟ್ ಹಾಕಿದ್ದಾರೆ.