alex Certify ಸೆಕೆಯಿಂದ ಪಾರಾಗೋಕೆ ಹೊಸ ಪ್ಲಾನ್​ ಕಂಡು ಹಿಡಿದ ಗ್ರಾಮಸ್ಥರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕೆಯಿಂದ ಪಾರಾಗೋಕೆ ಹೊಸ ಪ್ಲಾನ್​ ಕಂಡು ಹಿಡಿದ ಗ್ರಾಮಸ್ಥರು..!

ಬೇಸಿಗೆ ಕಾಲ ಶುರುವಾಗಿರೋದ್ರಿಂದ ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳೋಕೆ ಜನರು ಇನ್ನಿಲ್ಲದ ಹರಸಾಹಸ ಪಡ್ತಿದ್ದಾರೆ. ಫ್ಯಾನ್​, ಎಸಿಗಳು ಮನೆಯಲ್ಲಿ ಇರುವಾಗ, ಕಟ್ಟಡದಲ್ಲಿ ಇರುವಾಗ ಬಳಕೆ ಮಾಡಬಹುದು. ಆದರೆ ಮನೆಯಿಂದ ಹೊರಗಿದ್ದಾಗ ಸೆಖೆಯಿಂದ ಪಾರಾಗೋಕೆ ಏನು ಮಾಡೋದು..? ಎಂಬ ಯೋಚನೆ ಅನೇಕರಲ್ಲಿ ಇರಬಹುದು. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಈ ವಿಡಿಯೋದಲ್ಲಿ ಗ್ರಾಮಸ್ಥನೊಬ್ಬ ಕತ್ತೆಯ ಸಹಾಯದಿಂದ ಸೆಕೆಯಿಂದ ಪಾರಾಗಿದ್ದಾನೆ.

54 ಸೆಕೆಂಡ್​ಗಳ ಈ ವಿಡಿಯೋದಲ್ಲಿ, ಮರುಭೂಮಿ ಪ್ರದೇಶದಲ್ಲಿ ಮಂಚದ ಮೇಲೆ ಜನರು ಕೂತಿರೋದನ್ನ ನೀವು ನೋಡಬಹುದಾಗಿದೆ. ಒಂದು ಕಂಬಕ್ಕೆ ಎರಡು ಬಟ್ಟೆಗಳನ್ನ ಬಾವುಟದ ರೀತಿಯಲ್ಲಿ ಸಿಕ್ಕಿಸಲಾಗಿದೆ. ಅಲ್ಲೇ ಇರುವ ಕತ್ತೆಯು ಈ ಕಂಬವನ್ನ ತಿರುಗಿಸುತ್ತೆ. ಕತ್ತೆ ಆ ಕಂಬದ ಸುತ್ತ ಸುತ್ತುತ್ತಿದ್ದಂತೆಯೇ ಆ ಬಟ್ಟೆಯು ಗಾಳಿಬೀಸಲು ಆರಂಭಿಸುತ್ತೆ.

ಈ ವಿಡಿಯೋವನ್ನ ಐಪಿಎಸ್​ ಅಧಿಕಾರಿ ರುಪಿನ್ ಶರ್ಮಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಬೇಸಿಗೆಗೆ ಪರಿಹಾರ – ಸೂರ್ಯನ ಶಾಖದಿಂದ ಪಾರಾಗೋಕೆ ದೇಸಿ ಮದ್ದು ಎಂದು ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಭಾರೀ ಲೈಕ್ಸ್ ಸಂಪಾದಿಸುತ್ತಿದೆ. ಅನೇಕರು ಈ ವಿಡಿಯೋವನ್ನ ಇಷ್ಟಪಟ್ಟಿದ್ದರೆ, ಇನ್ನೂ ಹಲವರು ಇಲ್ಲಿ ಪ್ರಾಣಿ ಹಿಂಸೆ ಮಾಡಲಾಗ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

— Rupin Sharma IPS (@rupin1992) April 19, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...