
54 ಸೆಕೆಂಡ್ಗಳ ಈ ವಿಡಿಯೋದಲ್ಲಿ, ಮರುಭೂಮಿ ಪ್ರದೇಶದಲ್ಲಿ ಮಂಚದ ಮೇಲೆ ಜನರು ಕೂತಿರೋದನ್ನ ನೀವು ನೋಡಬಹುದಾಗಿದೆ. ಒಂದು ಕಂಬಕ್ಕೆ ಎರಡು ಬಟ್ಟೆಗಳನ್ನ ಬಾವುಟದ ರೀತಿಯಲ್ಲಿ ಸಿಕ್ಕಿಸಲಾಗಿದೆ. ಅಲ್ಲೇ ಇರುವ ಕತ್ತೆಯು ಈ ಕಂಬವನ್ನ ತಿರುಗಿಸುತ್ತೆ. ಕತ್ತೆ ಆ ಕಂಬದ ಸುತ್ತ ಸುತ್ತುತ್ತಿದ್ದಂತೆಯೇ ಆ ಬಟ್ಟೆಯು ಗಾಳಿಬೀಸಲು ಆರಂಭಿಸುತ್ತೆ.
ಈ ವಿಡಿಯೋವನ್ನ ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಬೇಸಿಗೆಗೆ ಪರಿಹಾರ – ಸೂರ್ಯನ ಶಾಖದಿಂದ ಪಾರಾಗೋಕೆ ದೇಸಿ ಮದ್ದು ಎಂದು ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಲೈಕ್ಸ್ ಸಂಪಾದಿಸುತ್ತಿದೆ. ಅನೇಕರು ಈ ವಿಡಿಯೋವನ್ನ ಇಷ್ಟಪಟ್ಟಿದ್ದರೆ, ಇನ್ನೂ ಹಲವರು ಇಲ್ಲಿ ಪ್ರಾಣಿ ಹಿಂಸೆ ಮಾಡಲಾಗ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.