ಬಂಡೀಪುರದ ಅರಣ್ಯ ಪ್ರದೇಶದಲ್ಲಿ ಕೆಸರು ಗುಂಡಿಯೊಳಗೆ ಸಿಲುಕಿಕೊಂಡಿದ್ದ ಆನೆಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಬಳಸಿ ರಕ್ಷಿಸಿದ್ದಾರೆ.
ಬಂಡೀಪುರದ ಮಲೆಯೂರು ಪ್ರದೇಶದ ಅರಣ್ಯಭಾಗದಲ್ಲಿ ಕೆಸರುಗುಂಡಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಈ ಆನೆಮರಿ ತನ್ನ ನಾಲ್ಕೂ ಕಾಲುಗಳನ್ನು ಆಡಿಸಲು ಶಕ್ತವಾಗಿದ್ದರೂ ಸಹ ಮೇಲೆದ್ದು ಬರಲು ಆಗುತ್ತಿರಲಿಲ್ಲ. ಆನೆಮರಿಗೆ ಹಗ್ಗವೊಂದನ್ನು ಸುತ್ತಿ ಮೇಲೆತ್ತಲೂ ಸಹ ಕಷ್ಟವಾದಾಗ ಜೆಸಿಬಿ ತರಿಸಿದ ಅಧಿಕಾರಿಗಳು ಅದನ್ನು ನಿಧಾನವಾಗಿ ಗಟ್ಟಿಯಾದ ನೆಲದತ್ತ ತಳ್ಳಿದ್ದಾರೆ.
‘ಲಸಿಕೆ’ಗೆ ‘ಕೋವಿನ್’ ಆಪ್ ನಲ್ಲಿ ನೋಂದಾಯಿಸುವವರಿಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ಹಿಂದಿ ಸೇರಿ 14 ‘ಭಾಷೆ’ಗಳಲ್ಲಿ ಮಾಹಿತಿ ಲಭ್ಯ
ಬಂಡೀಪುರ ಹುಲಿ ಸಂರಕ್ಷಣಾ ಧಾಮದ ಟ್ವಿಟರ್ ಹ್ಯಾಂಡಲ್‌ನಲ್ಲಿ ಆನೆಮರಿಯ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ತೋರಿಸಲಾಗಿದೆ. ಜೆಸಿಬಿಯಿಂದ ತಳ್ಳಲ್ಪಟ್ಟ ಕೆಲವೇ ಕ್ಷಣಗಳಲ್ಲಿ ಆನೆಯು ಬದಿಯಿಂದ ಎದ್ದು ಅಲ್ಲಿಂದ ನಡೆದುಕೊಂಡು ಹೋಗಿದೆ.