alex Certify ಆನೆಗಳ ವಿಡಿಯೋ ಮಾಡಲು ಹೋಗಿ ಪೇಚಿಗೆ ಸಿಲುಕಿದ ಪ್ರವಾಸಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆಗಳ ವಿಡಿಯೋ ಮಾಡಲು ಹೋಗಿ ಪೇಚಿಗೆ ಸಿಲುಕಿದ ಪ್ರವಾಸಿಗರು..!

ಆನೆಗಳ ವಿಡಿಯೋ ಚಿತ್ರೀಕರಿಸಲು ಹೋದ ಪ್ರವಾಸಿಗರಿಗೆ ಗಜರಾಜ ಕೊಂಚ ಸೆಕೆಂಡ್​ಗಳ ಕಾಲ ಬೆನ್ನಟ್ಟಿದಂತೆ ಅವರನ್ನ ಹೆದರಿಸಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ವಿಡಿಯೋ ಚಿತ್ರೀಕರಿಸುತ್ತಿದ್ದ ಮಹಿಳೆ ಏನೂ ಆಗಲ್ಲ ಎಂದು ಹೇಳುತ್ತಿದ್ದಂತೆಯೇ ಆನೆ ಅವರಿಗೆ ಬೆದರಿಕೆ ನೀಡಿದೆ. ಈ ವಿಡಿಯೋವನ್ನ ಐಎಫ್​ಎಸ್​ ಅಧಿಕಾರಿ ಸುರೇಂದ್ರ ಮೆಹ್ರಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ವಿಡಿಯೋದಲ್ಲಿ ಜೀಪ್​ನಲ್ಲಿ ಒಂದಷ್ಟು ಮಂದಿ ಪ್ರವಾಸಿಗರು ಕುಳಿತಿದ್ದಾರೆ. ಅಲ್ಲೇ ಸಮೀಪದಲ್ಲಿದ್ದ ಆನೆಗಳ ಹಿಂಡಿನ ವಿಡಿಯೋ ಚಿತ್ರೀಕರಿಸುತ್ತಿದ್ದರು. ಕೂಡಲೆ ಆನೆಯೊಂದು ಜೀಪ್​ನತ್ತ ಮುಖ ಮಾಡಿದೆ.

ಈ ವೇಳೆ ಚಾಲಕ ಜೀಪನ್ನ ಹಿಂದೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಗ ಮಹಿಳೆ ಏನೂ ಆಗೋದಿಲ್ಲ ಎಂದು ಹೇಳಿದ್ದಾಳೆ. ಆದರೆ ಆಕೆ ಆ ಮಾತನ್ನ ಹೇಳಿದ ಕೆಲವೇ ಸೆಕೆಂಡ್​ಗಳಲ್ಲಿ ಆನೆ ಜೀಪ್​ನತ್ತ ಹೆಜ್ಜೆ ಹಾಕಿದೆ.

ಇದರಿಂದ ಬೆದರಿದ ಪ್ರವಾಸಿಗರ ಗುಂಪು ಓಡು ಓಡು ಎಂದು ಹೇಳೋದನ್ನ ವಿಡಿಯೋದಲ್ಲಿ ಕೇಳಬಹುದಾಗಿದೆ. ಈ ವಿಡಿಯೋ ಪೋಸ್ಟ್ ಮಾಡಿರುವ ಸುರೇಂದ್ರ ಮೆಹ್ರಾ, ನಿಮ್ಮ ಸುರಕ್ಷತೆಯ ಕಡೆಗೆ ಗಮನ ಕೊಡಿ ಹಾಗೂ ವನ್ಯ ಜೀವಿಗಳ ಏಕಾಂತಕ್ಕೆ ಗೌರವ ನೀಡಿ ಎಂದು ಸಲಹೆ ನೀಡಿದ್ದಾರೆ.

— Surender Mehra IFS (@surenmehra) February 24, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...