
ವಿಡಿಯೋ ಚಿತ್ರೀಕರಿಸುತ್ತಿದ್ದ ಮಹಿಳೆ ಏನೂ ಆಗಲ್ಲ ಎಂದು ಹೇಳುತ್ತಿದ್ದಂತೆಯೇ ಆನೆ ಅವರಿಗೆ ಬೆದರಿಕೆ ನೀಡಿದೆ. ಈ ವಿಡಿಯೋವನ್ನ ಐಎಫ್ಎಸ್ ಅಧಿಕಾರಿ ಸುರೇಂದ್ರ ಮೆಹ್ರಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ಜೀಪ್ನಲ್ಲಿ ಒಂದಷ್ಟು ಮಂದಿ ಪ್ರವಾಸಿಗರು ಕುಳಿತಿದ್ದಾರೆ. ಅಲ್ಲೇ ಸಮೀಪದಲ್ಲಿದ್ದ ಆನೆಗಳ ಹಿಂಡಿನ ವಿಡಿಯೋ ಚಿತ್ರೀಕರಿಸುತ್ತಿದ್ದರು. ಕೂಡಲೆ ಆನೆಯೊಂದು ಜೀಪ್ನತ್ತ ಮುಖ ಮಾಡಿದೆ.
ಈ ವೇಳೆ ಚಾಲಕ ಜೀಪನ್ನ ಹಿಂದೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಗ ಮಹಿಳೆ ಏನೂ ಆಗೋದಿಲ್ಲ ಎಂದು ಹೇಳಿದ್ದಾಳೆ. ಆದರೆ ಆಕೆ ಆ ಮಾತನ್ನ ಹೇಳಿದ ಕೆಲವೇ ಸೆಕೆಂಡ್ಗಳಲ್ಲಿ ಆನೆ ಜೀಪ್ನತ್ತ ಹೆಜ್ಜೆ ಹಾಕಿದೆ.
ಇದರಿಂದ ಬೆದರಿದ ಪ್ರವಾಸಿಗರ ಗುಂಪು ಓಡು ಓಡು ಎಂದು ಹೇಳೋದನ್ನ ವಿಡಿಯೋದಲ್ಲಿ ಕೇಳಬಹುದಾಗಿದೆ. ಈ ವಿಡಿಯೋ ಪೋಸ್ಟ್ ಮಾಡಿರುವ ಸುರೇಂದ್ರ ಮೆಹ್ರಾ, ನಿಮ್ಮ ಸುರಕ್ಷತೆಯ ಕಡೆಗೆ ಗಮನ ಕೊಡಿ ಹಾಗೂ ವನ್ಯ ಜೀವಿಗಳ ಏಕಾಂತಕ್ಕೆ ಗೌರವ ನೀಡಿ ಎಂದು ಸಲಹೆ ನೀಡಿದ್ದಾರೆ.