alex Certify ಎದುರಾದ ಆನೆ ಕಂಡು ಎದ್ದುಬಿದ್ದು ಓಡಿದ ಬೈಕ್ ಸವಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದುರಾದ ಆನೆ ಕಂಡು ಎದ್ದುಬಿದ್ದು ಓಡಿದ ಬೈಕ್ ಸವಾರರು

ಮರಿಗಳೊಂದಿಗೆ ರಸ್ತೆ ದಾಟುತ್ತಿದ್ದಾಗ ಬೈಕ್ ನಲ್ಲಿ ಎದುರಾದ ಇಬ್ಬರನ್ನು ಆನೆಯೊಂದು ಬೆದರಿಸಿ ಓಡಿಸಿದೆ.

ಆನೆಗಳು ರಸ್ತೆ ದಾಟುತ್ತಿವೆ‌ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಹಲವು ವಾಹನ ಸವಾರರು ದೂರದಲ್ಲೇ ನಿಂತು ನೋಡುತ್ತಿದ್ದರು. ಆದರೆ, ಇಬ್ಬರು ಮಾತ್ರ, ಅಧಿಕಾರಿಗಳ ಎಚ್ಚರಿಕೆ ಲೆಕ್ಕಿಸದೇ ಆನೆಗಳ ಹಿಂಡಿನ ಸಮೀಪವೇ ದಾಟಿ ಹೋಗುವ ಯತ್ನ ಮಾಡಿದರು‌.

ಆದರೆ, ಆನೆಯೊಂದು ಅವರನ್ನು ಬೆನ್ನಟ್ಟುತ್ತಿದ್ದಂತೆ ಬೈಕನ್ನು ಬಿಟ್ಟು ಓಡಿಹೋದರು. ಗುಂಪಿನಲ್ಲಿ ಮರಿಗಳು ಸಹ ಇದ್ದಿದ್ದರಿಂದ ಆನೆಯು ಅಕ್ರಮಣಕ್ಕೆ ಮುಂದಾಗಿತ್ತು. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ತನ್ನ ಮರಿಯು ಜೊತೆಯಲ್ಲಿ ಇರುವಾಗ ದೈತ್ಯ ಪ್ರಾಣಿ, ಭಯಾನಕ ದೈತ್ಯ ಪ್ರಾಣಿಯಾಗುತ್ತದೆ” ಎಂದು ಅಡಿ ಬರಹ ಬರೆದಿದ್ದಾರೆ. ಇದು ಶ್ರೀಧರ್ ವಿ. ಎಂಬುವವರು ಮಾಡಿದ 16 ಸೆಕೆಂಡ್ ನ ವಿಡಿಯೋವಾಗಿದೆ.

— Susanta Nanda IFS (@susantananda3) April 29, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...