alex Certify ಮನಸ್ಸಿಗೆ ಮುದ ನೀಡುತ್ತೆ ಮರಿಯಾನೆಯ ತುಂಟಾಟದ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಮುದ ನೀಡುತ್ತೆ ಮರಿಯಾನೆಯ ತುಂಟಾಟದ ಈ ವಿಡಿಯೋ…!

ಆನೆ ಮರಿಗಳು ಮಾಡುವ ಚೇಷ್ಟೆಯ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಾನೇ ಇರುತ್ತೆ. ಇದೀಗ ಇಂತದ್ದೊಂದು ವಿಡಿಯೋವನ್ನ ಐಎಸ್​ಎಫ್​ ಅಧಿಕಾರಿ ಸುಸಂತಾ ನಂದಾ ಶೇರ್​ ಮಾಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಆನೆ ಮರಿ ನೀರಿನ ಟಬ್​ನಲ್ಲಿ ಮುಳುಗಿ ಎಂಜಾಯ್​ ಮಾಡ್ತಿದೆ.

ಸಮ್ಮರ್​ ಹೀಟ್​ನ್ನು ತಂಪಾಗಿಸೋ ಸಲುವಾಗಿ ಟಬ್​​ನಲ್ಲಿ ಮುಳುಗಿದ ಆನೆ ಮರಿ ನೀರಿನಲ್ಲಿ ಎಂಜಾಯ್​ ಮಾಡಿದೆ. ಆನೆ ಮರಿ ನೀರಿನಲ್ಲಿ ಮಸ್ತಿ ಮಾಡುತ್ತಿದ್ದ ವೇಳೆ ಅಲ್ಲೇ ಸಮೀಪದಲ್ಲಿದ್ದ ತಾಯಿ ಆನೆ ಮರಿಯ ಮೇಲೆ ಒಂದು ಕಣ್ಣಿಟ್ಟಿದ್ದು ಈ ದೃಶ್ಯ ಮುದ ನೀಡುತ್ತೆ.

ತಾಯಿ ಕಣ್ಗಾವಲಿನಲ್ಲಿ ಯಾರು ಸಮ್ಮರ್​ ಸೀಸನ್​ ಚಿಲ್​ ಮಾಡ್ತಿದ್ದಾರೆ ನೋಡಿ ಎಂದು ಸುಸಾಂತಾ ನಂದಾ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಅಂದಹಾಗೆ ಮರಿಯಾನೆಯ ತುಂಟಾಟದ ಬಗ್ಗೆ ನಿಮಗೆ ಏನೆನ್ನಿಸಿತು..?

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...