ಬೀದಿ ಬದಿ ಆಹಾರ ಎಂದರೆ ಭಾರತೀಯರಿಗೆ ಬಹಳ ಇಷ್ಟ. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಸ್ಟ್ರೀಟ್ ಫುಡ್ ಸವಿಯಲು ಸಾಧ್ಯವಾಗುತ್ತಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಇಂತಹ ಅಂಗಡಿಗಳ ಮಾಲೀಕರು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನೆಲೆಸಿದೆ. ಇವುಗಳಲ್ಲಿ ಕಾಂಟಾಕ್ಟ್‌ಲೆಸ್ ಫುಡ್ ಡೆಲಿವರಿ ಸಹ ಒಂದು. ಈ ರೀತಿಯ ವಾತಾವರಣವು ಕಂಡುಕೇಳರಿಯದ ಸಾಕಷ್ಟು ಆವಿಷ್ಕಾರಗಳಿಗೆ ಅನುವು ಮಾಡಿಕೊಟ್ಟಿದೆ.
ರಾಯ್ಪುರದ ಪಾನಿಪುರಿ ವರ್ತಕರೊಬ್ಬರು ತಮ್ಮ ಗ್ರಾಹಕರಿಗೆ ಕಾಂಟಾಕ್ಟ್ ಲೆಸ್ ಆಗಿ ಗೋಲ್‌ಗಪ್ಪಾಗಳನ್ನು ವಿತರಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗ್ರಾಹಕರ ರುಚಿಗೆ ತಕ್ಕಂತೆ ಮೂರು ವಿಧದ ಜಲಜೀರಾಗಳೊಂದಿಗೆ ಪುರಿಗಳನ್ನು ಈ ಯಂತ್ರ ಬಡಿಸುತ್ತದೆ. “Touch Me Not Pani Puri” ಹೆಸರಿನ ಈ ಸ್ಟಾಲ್ ಬಗ್ಗೆ ಐಎಎಸ್ ಅಧಿಕಾರಿ ಅವಾನಿಶ್ ಶರಣ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.