alex Certify BIG NEWS: ಅಗ್ರಿ ಗೋಲ್ಡ್ ನಿಂದ ಕೋಟ್ಯಂತರ ರೂ.ವಂಚನೆ – ನಿರ್ದೇಶಕನ ಬಂಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಗ್ರಿ ಗೋಲ್ಡ್ ನಿಂದ ಕೋಟ್ಯಂತರ ರೂ.ವಂಚನೆ – ನಿರ್ದೇಶಕನ ಬಂಧನ

ಹೈದರಾಬಾದ್: ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ರಿ ಗೋಲ್ಡ್ ಸಂಸ್ಥೆ ನಿರ್ದೇಶಕ ಅವ್ವ ವೆಂಕಟರಾಮ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಅಗ್ರಿ ಗೋಲ್ಡ್ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವೆಡೆಗಳಲ್ಲಿ ಶಾಖೆ ಹೊಂದಿದ್ದು, ನಿರ್ದೇಶಕ ಅವ್ವ ವೆಂಕಟರಾಮ ಜನರಿಂದ ಹಣ ಕಟ್ಟಿಸಿಕೊಂಡು ವಂಚಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅವ್ವ ವೆಂಕಟರಾಮ ವಿರುದ್ಧ 6,400 ಕೋಟಿ ಅವ್ಯವಹಾರವೆಸಗಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ಇಡಿ ತನಿಖೆ ನಡೆಸುತ್ತಿದೆ.

ಸಂಸ್ಥೆಯ ನಿರ್ದೇಶಕ ಅವ್ವ ವೆಂಕಟರಾಮ ರಾವ್, ಅವ್ವ ವೆಂಕಟ ಸೇಶು ನಾರಾಯಣ ಹಾಗೂ ಇನ್ನೋರ್ವ ನಿರ್ದೇಶಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...