ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ – ಎನ್ಸಿಆರ್ ಪ್ರದೇಶದಲ್ಲಿ ಇಂದು ಸಂಜೆ 7 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದೆ.
ಎನ್ಸಿಆರ್ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ಸಂಭವಿಸಿದ 9ನೇ ಲಘು ಭೂಕಂಪ ಇದಾಗಿದೆ. 2 ತಿಂಗಳ ಅವಧಿಯಲ್ಲಿ 17 ನೇ ಸಲ ಭೂಮಿ ಕಂಪಿಸಿದೆ. ಹರಿಯಾಣದಿಂದ ನೈರುತ್ಯ ಭಾಗಕ್ಕೆ 60 ಕಿಲೋ ಮೀಟರ್ ದೂರದ ಗುರುಗ್ರಾಮದಲ್ಲಿ ಭೂಕಂಪನದ ಕೇಂದ್ರಬಿಂದು ಕಂಡುಬಂದಿದೆ. ರಿಕ್ಟರ್ ಮಾಪಕದಲ್ಲಿ 4.5 ರಷ್ಟು ತೀವ್ರತೆಯ ಕಂಪನವಾಗಿದೆ.
ಜೂನ್ 8 ರಂದು ಕೊನೆಯ ಭೂಕಂಪಕ್ಕೆ ದೆಹಲಿ ಸಾಕ್ಷಿಯಾಗಿದ್ದು ರಿಕ್ಟರ್ ಮಾಪಕದಲ್ಲಿ 2.1 ರಷ್ಟು ತೀವ್ರತೆ ಕಂಡುಬಂದಿತ್ತು. ನಿರಂತರವಾಗಿ ಲಘು ಭೂಕಂಪನಗಳು ಆಗುತ್ತಿರುವುದರಿಂದ ದೊಡ್ಡ ಭೂಕಂಪ ಸಂಭವಿಸುವ ಆತಂಕ ಎದುರಾಗಿದೆ. ಆದರೆ ಭೂಕಂಪ ಶಾಸ್ತ್ರಜ್ಞರು ಹೇಳುವ ಪ್ರಕಾರ ಚಲನೆಯಿಂದ ಆಗಾಗ ಲಘು ಕಂಪನಗಳು ಉಂಟಾಗುತ್ತದೆ ಎನ್ನಲಾಗಿದೆ.