alex Certify BIG NEWS: ಭಾರತದಲ್ಲಿ ವ್ಯರ್ಥವಾಗುವ ಆಹಾರ ಪದಾರ್ಥ ಕುರಿತು ವಿಶ್ವಸಂಸ್ಥೆಯಿಂದ ಆಘಾತಕಾರಿ ಮಾಹಿತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದಲ್ಲಿ ವ್ಯರ್ಥವಾಗುವ ಆಹಾರ ಪದಾರ್ಥ ಕುರಿತು ವಿಶ್ವಸಂಸ್ಥೆಯಿಂದ ಆಘಾತಕಾರಿ ಮಾಹಿತಿ….!

2019ರಲ್ಲಿ ಸಂಪೂರ್ಣ ವಿಶ್ವದಲ್ಲಿ ಬರೋಬ್ಬರಿ 931 ಮಿಲಿಯನ್​ ಟನ್​ ಆಹಾರವನ್ನ ವ್ಯರ್ಥ ಮಾಡಲಾಗಿದೆ.

ಇದು ಎಷ್ಟು ದೊಡ್ಡ ಪ್ರಮಾಣದಲ್ಲಿದೆ ಅಂದರೆ ಇದು ಭೂಮಿಯನ್ನ 7 ಸುತ್ತು ಹಾಕುವಷ್ಟಿದೆ ಎಂದು ವಿಶ್ವಸಂಸ್ಥೆ​ ವರದಿ ಹೇಳಿದೆ. ಭಾರತದಲ್ಲಿ 68.7 ಮಿಲಿಯನ್​ ಟನ್​ ಮನೆ ಆಹಾರವನ್ನ ಪ್ರತಿ ವರ್ಷ ವ್ಯರ್ಥ ಮಾಡಲಾಗುತ್ತೆ ಎಂದು ಇದೇ ವರದಿ ತಿಳಿಸಿದೆ.

ಈ ವಿಚಾರವಾಗಿ ಮಾಹಿತಿ ನೀಡಿದ ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ ಹಾಗೂ ಪಾಲುದಾರ ಸಂಸ್ಥೆ WRAP, 2019ರಲ್ಲಿ 931 ದಶಲಕ್ಷ ಟನ್​ ಆಹಾರ ತ್ಯಾಜ್ಯ ಉತ್ಪತ್ತಿಯಾಗಿದೆ. ಇದರಲ್ಲಿ 61 ಶೇಕಡಾ ಮನೆಯಿಂದ ಬಂದ ಆಹಾರ ತ್ಯಾಜ್ಯವಾಗಿದೆ. 26 ಪ್ರತಿಶತ ಫುಡ್​ ಸರ್ವೀಸ್​ನಿಂದ ಹಾಗೂ 13 ಶೇಕಡಾ ಚಿಲ್ಲರೆ ವ್ಯಾಪರಕ್ಕೆ ಸೇರಿದ್ದಾಗಿದೆ ಎಂದು ಹೇಳಿದೆ.

ಇದರ ಅರ್ಥ ಭೂಮಿ ಮೇಲೆ ತಯಾರಾದ ಒಟ್ಟು ಆಹಾರದಲ್ಲಿ 17 ಪ್ರತಿಶತ ಆಹಾರ ವ್ಯರ್ಥವಾಗುತ್ತಿದೆ ಎಂದು ವರದಿ ತಿಳಿಸಿದೆ. ಈ ವ್ಯರ್ಥ ಆಹಾರದ ಗಾತ್ರವು 23 ಮಿಲಿಯನ್​​ ವಸ್ತುವನ್ನ ಹೊರುವ ಸಾಮರ್ಥ್ಯವುಳ್ಳ 40 ಟ್ರಕ್​​ಗಳನ್ನ ತುಂಬಹುದು. ಅಲ್ಲದೇ ಇಡೀ ಭೂಮಿಯಲ್ಲಿ 7 ಸುತ್ತು ಹಾಕಬಲ್ಲದು ಎಂದು ವಿಶ್ವಸಂಸ್ಥೆಯ​ ಎಜೆನ್ಸಿ ಹೇಳಿದೆ.

ಭಾರತದಲ್ಲಿ ಪ್ರತಿ ವರ್ಷ 6,87,60,163 ಟನ್​ ಮನೆಯ ಆಹಾರವನ್ನ ವರ್ಥ್ಯ ಮಾಡಲಾಗುತ್ತಿದೆ. ಅಮೆರಿಕದಲ್ಲಿ ಪ್ರತಿ ವರ್ಷ 1,93,59,951 ಟನ್​ ಮನೆ ಆಹಾರ ವ್ಯರ್ಥ ಮಾಡಲಾಗುತ್ತೆ. ಚೀನಾದಲ್ಲಿ ಪ್ರತಿ ವರ್ಷ 9,16,46,213 ಟನ್​ ಆಹಾರವನ್ನ ವ್ಯರ್ಥ ಮಾಡಲಾಗ್ತಿದೆ ಎಂದು ವರದಿ ಹೇಳಿದೆ.

ವಿಶ್ವದಲ್ಲಿ ಒಟ್ಟು ಲಭ್ಯವಿರುವ ಆಹಾರದಲ್ಲಿ 11 ಪ್ರತಿಶತದಷ್ಟು ಮನೆ ಆಹಾರ ತ್ಯಾಜ್ಯದ ರೂಪದಲ್ಲಿ ವ್ಯರ್ಥವಾಗ್ತಿದೆ. ಇದರಲ್ಲಿ ಫುಡ್​ ಸರ್ವೀಸ್​ಗಳ ಪಾಲು 5 ಪ್ರತಿಶತ ಇದ್ದರೆ ಚಿಲ್ಲರೆ ಮಳಿಗೆಗಳ ಪಾಲು 2ಪ್ರತಿಶತದಷ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...