2019ರಲ್ಲಿ ಸಂಪೂರ್ಣ ವಿಶ್ವದಲ್ಲಿ ಬರೋಬ್ಬರಿ 931 ಮಿಲಿಯನ್ ಟನ್ ಆಹಾರವನ್ನ ವ್ಯರ್ಥ ಮಾಡಲಾಗಿದೆ.
ಇದು ಎಷ್ಟು ದೊಡ್ಡ ಪ್ರಮಾಣದಲ್ಲಿದೆ ಅಂದರೆ ಇದು ಭೂಮಿಯನ್ನ 7 ಸುತ್ತು ಹಾಕುವಷ್ಟಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ಭಾರತದಲ್ಲಿ 68.7 ಮಿಲಿಯನ್ ಟನ್ ಮನೆ ಆಹಾರವನ್ನ ಪ್ರತಿ ವರ್ಷ ವ್ಯರ್ಥ ಮಾಡಲಾಗುತ್ತೆ ಎಂದು ಇದೇ ವರದಿ ತಿಳಿಸಿದೆ.
ಈ ವಿಚಾರವಾಗಿ ಮಾಹಿತಿ ನೀಡಿದ ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ ಹಾಗೂ ಪಾಲುದಾರ ಸಂಸ್ಥೆ WRAP, 2019ರಲ್ಲಿ 931 ದಶಲಕ್ಷ ಟನ್ ಆಹಾರ ತ್ಯಾಜ್ಯ ಉತ್ಪತ್ತಿಯಾಗಿದೆ. ಇದರಲ್ಲಿ 61 ಶೇಕಡಾ ಮನೆಯಿಂದ ಬಂದ ಆಹಾರ ತ್ಯಾಜ್ಯವಾಗಿದೆ. 26 ಪ್ರತಿಶತ ಫುಡ್ ಸರ್ವೀಸ್ನಿಂದ ಹಾಗೂ 13 ಶೇಕಡಾ ಚಿಲ್ಲರೆ ವ್ಯಾಪರಕ್ಕೆ ಸೇರಿದ್ದಾಗಿದೆ ಎಂದು ಹೇಳಿದೆ.
ಇದರ ಅರ್ಥ ಭೂಮಿ ಮೇಲೆ ತಯಾರಾದ ಒಟ್ಟು ಆಹಾರದಲ್ಲಿ 17 ಪ್ರತಿಶತ ಆಹಾರ ವ್ಯರ್ಥವಾಗುತ್ತಿದೆ ಎಂದು ವರದಿ ತಿಳಿಸಿದೆ. ಈ ವ್ಯರ್ಥ ಆಹಾರದ ಗಾತ್ರವು 23 ಮಿಲಿಯನ್ ವಸ್ತುವನ್ನ ಹೊರುವ ಸಾಮರ್ಥ್ಯವುಳ್ಳ 40 ಟ್ರಕ್ಗಳನ್ನ ತುಂಬಹುದು. ಅಲ್ಲದೇ ಇಡೀ ಭೂಮಿಯಲ್ಲಿ 7 ಸುತ್ತು ಹಾಕಬಲ್ಲದು ಎಂದು ವಿಶ್ವಸಂಸ್ಥೆಯ ಎಜೆನ್ಸಿ ಹೇಳಿದೆ.
ಭಾರತದಲ್ಲಿ ಪ್ರತಿ ವರ್ಷ 6,87,60,163 ಟನ್ ಮನೆಯ ಆಹಾರವನ್ನ ವರ್ಥ್ಯ ಮಾಡಲಾಗುತ್ತಿದೆ. ಅಮೆರಿಕದಲ್ಲಿ ಪ್ರತಿ ವರ್ಷ 1,93,59,951 ಟನ್ ಮನೆ ಆಹಾರ ವ್ಯರ್ಥ ಮಾಡಲಾಗುತ್ತೆ. ಚೀನಾದಲ್ಲಿ ಪ್ರತಿ ವರ್ಷ 9,16,46,213 ಟನ್ ಆಹಾರವನ್ನ ವ್ಯರ್ಥ ಮಾಡಲಾಗ್ತಿದೆ ಎಂದು ವರದಿ ಹೇಳಿದೆ.
ವಿಶ್ವದಲ್ಲಿ ಒಟ್ಟು ಲಭ್ಯವಿರುವ ಆಹಾರದಲ್ಲಿ 11 ಪ್ರತಿಶತದಷ್ಟು ಮನೆ ಆಹಾರ ತ್ಯಾಜ್ಯದ ರೂಪದಲ್ಲಿ ವ್ಯರ್ಥವಾಗ್ತಿದೆ. ಇದರಲ್ಲಿ ಫುಡ್ ಸರ್ವೀಸ್ಗಳ ಪಾಲು 5 ಪ್ರತಿಶತ ಇದ್ದರೆ ಚಿಲ್ಲರೆ ಮಳಿಗೆಗಳ ಪಾಲು 2ಪ್ರತಿಶತದಷ್ಟಿದೆ.