alex Certify ದುರ್ಗಾ ಪೂಜೆ ಪೆಂಡಾಲ್‌ ನಲ್ಲಿ ಅಸುರನಾದ ಚೀನಾ ಅಧ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುರ್ಗಾ ಪೂಜೆ ಪೆಂಡಾಲ್‌ ನಲ್ಲಿ ಅಸುರನಾದ ಚೀನಾ ಅಧ್ಯಕ್ಷ

Durga Idol in Bengal Replaces Asur With 'Xi Jinping', Photo Goes Viral on Social Media

ಕೋವಿಡ್-19 ವ್ಯಾಪಿಸುವ ವೇಳೆ ಘನಘೋರ ಮಟ್ಟದ ನಿರ್ಲಕ್ಷ್ಯ ತೋರಿದ ಚೀನಾ‌ ಸರ್ಕಾರ ಜಗತ್ತಿನ ದೃಷ್ಟಿಯಲ್ಲಿ ದೊಡ್ಡ ವಿಲನ್ ಆಗಿಬಿಟ್ಟಿದೆ.

ಇದೀಗ ಪಶ್ಚಿಮ ಬಂಗಾಳದ ಬಹ್ರಾಂಪುರದ ನವರಾತ್ರಿ ಸಂದರ್ಭ ಹಮ್ಮಿಕೊಂಡಿರುವ ದುರ್ಗಾ ಪೂಜೆ ಪೆಂಡಾಲ್ ಕಾರ್ಯಕ್ರಮವೊಂದರಲ್ಲಿ ಚೀನಾ ಅಧ್ಯಕ್ಷ ಶೀ ಝಿನ್‌ಪಿಂಗ್‌ರನ್ನು ಅಸುರನ ಅವತಾರದಲ್ಲಿ ತೋರಲಾಗಿದೆ.

ನಾವೆಲ್ ಕೊರೋನಾ ವೈರಸ್ ಮೇಲಿನ ಥೀಮ್‌ಗಳು ಈ ವರ್ಷ ಬಲೇ ಜನಪ್ರಿಯವಾಗಿಬಿಟ್ಟಿವೆ. ಇಲ್ಲಿನ ಸ್ವರ್ಗಧಾಮ ಸರ್ಬೋಜೋನಿನ್ ಕ್ಲಬ್‌ನ ದುರ್ಗಾ ಪೂಜೆ ಆಯೋಜಕರು ಬೆಹ್ರಾಂಪುರ ಹಾಗೂ ಮುರ್ಶಿದಾಬಾದ್‌ಗಳಲ್ಲಿ ಹಾಕಿಕೊಂಡಿರುವ ಪೆಂಡಾಲ್‌ಗಳಲ್ಲಿ ಅಸುರನ ಪ್ರತಿಮೆ ಬದಲಿಗೆ ಝಿನ್‌ಪಿಂಗ್ ಪ್ರತಿಮೆಗಳನ್ನು ಇಟ್ಟಿದ್ದಾರೆ.

ದುರ್ಗೆಯ ಸಿಂಹದ ಬಾಯಿಗೆ ಸಿಲುಕಿರುವ ಪುರುಷ ಮೂರ್ತಿಯ ತಲೆ ಕೆಳಗೆ ಬಿದ್ದಿದ್ದು, ಅದು ಝಿನ್‌ಪಿಂಗ್‌ರಂತೆಯೇ ಕಾಣುತ್ತಿದೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರತಿಮೆಗಳನ್ನು ನಿರ್ಮಿಸಿದ ನಿರ್ಮಾತೃ ಅಶೀಂ ಪಾಲ್‌ರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...