ಕೋಲ್ಕತ್ತಾದ ಜೋರಬಗನ್ನಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಸಹಾಯದಿಂದ 9 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಬಾಲಕಿಗೆ ಚಿಪ್ಸ್ ಹಾಗೂ ಬಿರಿಯಾನಿಯ ಆಮಿಷವನ್ನೊಡ್ಡಿ ಅತ್ಯಾಚಾರವೆಸಗಿ ಬಳಿಕ ಆಕೆಯನ್ನ ಕೊಲೆ ಮಾಡಲಾಗಿದೆ.
ಅಮೃತಶಿಲೆ ಕತ್ತರಿಸುವ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಈ ಕೃತ್ಯವನ್ನ ಎಸಗಲು ಸೆಕ್ಯೂರಿಟಿ ಗಾರ್ಡ್ ಸಹಾಯ ಮಾಡಿದ್ದಾನೆ ಎನ್ನಲಾಗಿದೆ.
ಈ ಕೃತ್ಯ ಎಸಗಿನ ವ್ಯಕ್ತಿಯನ್ನ ರಣವೀರ್ ತಂತಿ ಅಲಿಯಾಸ್ ರಘುವೀರ್ ಎಂದು ಗುರುತಿಸಲಾಗಿದೆ. ಆಕೆಯನ್ನ ಕೊಲೆ ಮಾಡುವ ಮುನ್ನ 9 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ತಿಳಿದು ಬಂದಿದೆ. ರಾಮಕುಮಾರ್ ಅಲಿಯಾಸ್ ಲಂಬು ಎಂಬಾತ ಆಕೆಯನ್ನ ಕೊಲೆ ಮಾಡಲು ರಘುವೀರ್ಗೆ ಸಹಾಯ ಮಾಡಿದ್ದ ಎನ್ನಲಾಗಿದೆ.
ಇನ್ನು ಮೃತ ಬಾಲಕಿಗೆ ರಘುವೀರ್ ಮೊದಲಿನಿಂದಲೂ ಪರಿಚಯಸ್ಥನಾಗಿದ್ದು ಆಕೆಗೆ ಬಿರಿಯಾನಿ ಹಾಗೂ ಚಿಪ್ಸ್ ಕೊಡುವ ಆಮಿಷವೊಡ್ಡಿದ್ದ ಎನ್ನಲಾಗಿದೆ. ಬಳಿಕ ಲಂಬು ಹಾಗೂ ರಘುವೀರ್ ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಚಾಕುವಿನಿಂದ ಗಂಟಲು ಸೀಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಆರೋಪಿಗಳು ಮಕ್ಕಳ ಅಶ್ಲೀಲ ದೃಶ್ಯವನ್ನ ನೋಡುವ ಅಭ್ಯಾಸ ಹೊಂದಿದ್ದರು ಎನ್ನಲಾಗಿದೆ. ಆರೋಪಿಗಳ ಮೊಬೈಲ್ನ್ನು ವಶಪಡಿಸಿಕೊಂಡಿದ್ದ ವೇಳೆ ಈ ಅಂಶ ಬೆಳಕಿಗೆ ಬಂದಿದೆ.