ಪಾನಮತ್ತನಾಗಿ ವಾಹನ ಚಲಾಯಿಸುತ್ತಿದ್ದ ವೈದ್ಯನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬಳಿಕ ತನ್ನ ವಾಹನವನ್ನ ಕೊಡಲಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಗಸ್ತು ವಾಹನವನ್ನೇ ಓಡಿಸಿ ಪೊಲೀಸ್ ಠಾಣೆ ಅತಿಥಿಯಾಗಿದ್ದಾನೆ.
ವೈದ್ಯನನ್ನ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಬಳಿಕ ಈತನನ್ನ ಈಗ ಚೆಂಗಲ್ಪಟ್ಟು ಜೈಲಿನಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಣಿಪೇಟೆ ಜಿಲ್ಲೆಯ ಅರಕೊಣಂ ಮೂಲದ ಎಸ್. ಮುತ್ತು ಗಣೇಶ್ ಬಂಧಿತ ಆರೋಪಿ. ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚರ್ಮರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಭಾನುವಾರ ಮುಂಜಾನೆ 1.30ರ ಸುಮಾರಿಗೆ ಈತನನ್ನ ಹಿಡಿದ ಪೊಲೀಸರು ದಂಡ ವಿಧಿಸಿದ್ದಾರೆ. ಇದಾದ ಬಳಿಕ ವೈದ್ಯ ತನ್ನ ವಾಹನ ವಾಪಾಸ್ ಮಾಡಿ ಎಂದು ವಾದ ಮಾಡಿದ್ದಾನೆ. ಆದರೆ ಪೊಲೀಸರು ಇದಕ್ಕೆ ನಿರಾಕರಿಸಿದ ಕಾರಣ ಮುತ್ತು ಗಣೇಶ್ ಪೊಲೀಸರ ವಾಹನವನ್ನೇ ಚಲಾಯಿಸಿದ್ದಾನೆ.