alex Certify ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿಬೀಳಿಸುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿಬೀಳಿಸುವ ದೃಶ್ಯ

ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರನ್ನು ಪೊಲೀಸರು ಹಿಡಿಯುವುದು ಎಲ್ಲೆಡೆ ಸಾಮಾನ್ಯ ವಿಚಾರ. ಇಲ್ಲೊಬ್ಬ ಪೊಲೀಸ್ ಮಹಾಶಯ ಕಂಠಪೂರ್ತಿ ಕುಡಿದು ಅಚಾತುರ್ಯದಿಂದ ಕಾರನ್ನು ಚಲಾಯಿಸಿ 60 ವರ್ಷದ ವೃದ್ಧೆಯ ಮೇಲೆ ಹರಿಸಿದ ಪ್ರಸಂಗ ದೆಹಲಿಯಲ್ಲಿ ನಡೆದಿದೆ. ಸಿಸಿ ಕ್ಯಾಮೆರಾ ಫುಟೇಜ್ ನಲ್ಲಿ ಪೊಲೀಸಪ್ಪನ ಅಚಾತುರ್ಯ ದಾಖಲಾಗಿದ್ದು ವಿಡಿಯೋ ವೈರಲ್ ಆಗಿದೆ.

ರಸ್ತೆಯಲ್ಲಿ ನಡೆದುಹೋಗುತ್ತಿದ್ದ ವೃದ್ಧೆಗೆ ಗುದ್ದಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯೋಗೇಂದ್ರ, ಬಳಿಕ ಆಕೆ ಬಾನೆಟ್ ಮೇಲೆ ಬಿದ್ದು ನೆಲಕ್ಕುರುಳಿದರೂ ಆಕೆಯ ಮೇಲೆ ಕಾರು ಹರಿಸಿದ್ದಾನೆ. ಇದರಿಂದ ಕೊಂಚ ದೂರ ಆಕೆ ಎಳೆದೊಯ್ದಿದ್ದಾರೆ.

ಇದನ್ನು ಕಂಡ ಪ್ರತ್ಯಕ್ಷದರ್ಶಿಗಳು ತಕ್ಷಣವೇ ಕಾರನ್ನು ನಿಲ್ಲಿಸುವಲ್ಲಿ ಸಫಲರಾದರು. ಘಟನೆಗೆ ಕಾರಣರಾದ ಯೋಗೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ದೆಹಲಿಯ ಗಾಜಿಪುರ ಪ್ರದೇಶದ ಚಿಲ್ಲಾ ಗ್ರಾಮದಲ್ಲಿ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...