ಡೆಡ್‌ಲೈನ್ ಒತ್ತಡದಲ್ಲಿ ಕೆಲಸ ಮಾಡುತ್ತಾ ನಿದ್ರೆ ಬಿಟ್ಟು ಕೆಲಸ ಮಾಡುವ ವೇಳೆ ಕಾಫಿ ಕುಡಿಯುತ್ತಾ ಇರುವುದರಿಂದ ನಿಮಲ್ಲಿ ಚೈತನ್ಯ ತುಂಬಿಕೊಳ್ಳಬಹುದು ಎಂದು ನಿಮಗೆ ಅನಿಸಬಹುದು. ಆದರೆ ಹೊಸ ಅಧ್ಯಯನದ ಪ್ರಕಾರ, ಕೆಫೀನ್ ನಿಮ್ಮನ್ನು ಎಚ್ಚರವಾಗಿರಲು ಸಹಾಯ ಮಾಡಿದರೂ, ನಿದ್ರೆಗೆಟ್ಟಾಗ ನಿಮ್ಮಿಂದ ಆಗಬಲ್ಲ ತಪ್ಪುಗಳನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಮಿಚಿಗನ್ ರಾಜ್ಯ ವಿವಿ ನಡೆಸಿದ ಪ್ರಯೋಗದಲ್ಲಿ 275 ಮಂದಿ ಪಾಲ್ಗೊಂಡಿದ್ದು, ಹೆಚ್ಚು ಏಕಾಗ್ರತೆ ಬೇಡುವ ಸರಳ ಟಾಸ್ಕ್ ಒಂದನ್ನು ಮಾಡಿ ಮುಗಿಸಲು ಅವರಿಗೆ ತಿಳಿಸಲಾಗಿತ್ತು. ನಿದ್ರೆಗೆಟ್ಟಾಗ ಅವರ ಏಕಾಗ್ರತೆಗೆ ತೊಂದರೆಯಾಗಿದ್ದರೂ ಸಹ ಕೆಫೀನ್‌ನಿಂದಾಗಿ ತಮ್ಮ ಟಾಸ್ಕ್‌ಗಳನ್ನು ಯಶಸ್ವಿಯಾಗಿ ಮುಗಿಸಲು ಸಾಧ್ಯವಾಗಿದೆ.
ಆದರೆ ಇದಕ್ಕಿಂತ ಇನ್ನೂ ಕ್ಲಿಷ್ಠವಾದ ಕೆಲಸ ಕೊಟ್ಟು, ಸಣ್ಣ-ಸಣ್ಣ ಕ್ರಿಯೆಗಳನ್ನು ನಿರ್ದಿಷ್ಟ ಆಧಾರದಲ್ಲಿ ಪುನರಾವರ್ತಿಸದೇ ಮಾಡಿ ಮುಗಿಸಲು ಸೂಚಿಸಿದಾಗ, ಅಭ್ಯರ್ಥಿಗಳಲ್ಲಿ ಕೆಫೀನ್ ಅಷ್ಟಾಗಿ ಪ್ರಭಾವ ಬೀರಲು ಸಾಧ್ಯವಾಗಿಲ್ಲ ಎಂದು ಅಧ್ಯಯನದ ವರದಿ ರಚಿಸಿದವರಲ್ಲಿ ಒಬ್ಬರಾದ ಕಿಂಬರ್ಲಿ ಫೆನ್ ಬಿಡಿಸಿ ಹೇಳಿದ್ದಾರೆ.
“ಕೆಫೀನ್‌ನಿಂದ ಎಚ್ಚರವಾಗಿರಲು ಸಾಧ್ಯವಿದ್ದರೂ ಸಹ, ವೈದ್ಯಕೀಯ ಪ್ರಮಾದಗಳು ಹಾಗೂ ಕಾರು ಅಪಘಾತಗಳಂತಹ ಕ್ರಿಯಾತ್ಮಕ ದೋಷಗಳನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ಮಿಚಿಗನ್ ರಾಜ್ಯ ವಿವಿಯ ಮನಶಾಸ್ತ್ರ ಪ್ರಾಧ್ಯಾಪಕರಾದ ಫೆನ್ ತಿಳಿಸಿದ್ದಾರೆ.
ಹಣದ ಹೊಳೆಯಾಗ್ಬೇಕೆಂದ್ರೆ ಮನೆಯ ಈ ದಿಕ್ಕಿನಲ್ಲಿರಲಿ ಮನಿ ಪ್ಲಾಂಟ್
ಕೆಫೀನ್‌ನಲ್ಲಿ ಸೈಕೋಆಕ್ಟೀವ್ ಸ್ಟಿಮ್ಯುಲೆಂಟ್ ಇರುವ ಕಾರಣ ನಿದ್ರೆ ಮಾಡಬೇಕಾದ ಅವಧಿಯಲ್ಲಿ ಎಚ್ಚರಿಕೆಯಿಂದ ಇರಲು ಅನುಕೂಲವೆಂದು ನಂಬಿರುವ ಕಾರಣ ಬಹುತೇಕ ಎಲ್ಲ ಆಫೀಸ್‌ಗಳಲ್ಲೂ ಕಾಫಿ ಮಷೀನ್‌ಗಳು ಇರುವುದನ್ನು ನೋಡಬಹುದಾಗಿದೆ.
ನಿದ್ರೆಗೆಡುವ ವಿಚಾರದಲ್ಲಿ ಭಾರತೀಯರು ಎರಡನೇ ಸ್ಥಾನದಲ್ಲಿದ್ದು, ದೇಶದ ವಯಸ್ಕರ ಪೈಕಿ 33% ಮಂದಿ ನಿದ್ರಾಹೀನತೆಯಿಂದ ನರಳುತ್ತಿರುವುದಾಗಿ 2016ರಲ್ಲಿ ಪ್ರಕಟವಾಗಿದ್ದ ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಅಂಡ್ ಪ್ರೈಮರಿ ಕೇರ್‌ನಲ್ಲಿ ಪ್ರಕಟಿಸಲಾಗಿತ್ತು.