ಪೊಲೀಸ್ ಅಧಿಕಾರಿಯೊಬ್ಬರು ಯುವಕನೊಬ್ಬನನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಶೂಟ್ ಮಾಡಿ, ಬಳಿಕ ಕೊಲೆಯಾದ ವ್ಯಕ್ತಿ ಬಳಿ ಅಳುತ್ತಾ ಕುಳಿತ ಯುವತಿಗೂ ಶೂಟ್ ಮಾಡುವ ವಿಡಿಯೋವೊಂದು ವೈರಲ್ ಆಗಿತ್ತು. ಜನ ಇದನ್ನು ನಿಜ ಘಟನೆಯೆಂದೇ ಭಾವಿಸಿದ್ದರು.
ಆದರೆ ಉತ್ತರ ಪ್ರದೇಶದ ಪೊಲೀಸ್ ಸಿಬ್ಬಂದಿಯೊಬ್ಬರು ಈ ವಿಡಿಯೋದ ವಾಸ್ತವಿಕತೆಯನ್ನು ಪರಿಶೀಲಿಸಿದ ಬಳಿಕ ಆ ದೃಶ್ಯ ವೆಬ್ ಸೀರೀಸ್ ಶೋ ಒಂದರದ್ದು ಎಂದು ಗೊತ್ತಾಗಿದೆ.
ಪೋಷಕರೇ ಎಚ್ಚರ: ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ ಕೊರೊನಾ ಎರಡನೇ ಅಲೆ
ಭಯೋತ್ಪಾದನೆ ನಿಗ್ರಹ ದಳದ ಹೆಚ್ಚುವರಿ ಎಸ್ಪಿ ರಾಹುಲ್ ಶ್ರೀವಾಸ್ತವ ಅವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಇದರಿಂದ ಬಹಳಷ್ಟು ಗೊಂದಲ ಹಾಗೂ ತನಿಖೆಗಳು ನಡೆದಿವೆ ಎಂದಿದ್ದಾರೆ.
ಹರಿಯಾಣಾದ ಕರ್ನಲ್‌ನ ಕೆಫೆಯೊಂದರ ಹೊರಗೆ ಶೂಟ್ ಮಾಡಲಾದ ವೆಬ್ ಸೀರೀಸ್ ಒಂದರ ದೃಶ್ಯ ಇದಾಗಿದ್ದು, ಈ ವಿಚಾರವನ್ನು ’ಫ್ರೆಂಡ್ಸ್ ಕೆಫೆ’ಯ ವ್ಯವಸ್ಥಾಪಕರು ಖಾತ್ರಿಪಡಿಸಿದ್ದಾರೆ ಎಂದಿದ್ದಾರೆ ಎಎಸ್ಪಿ ರಾಹುಲ್.
ಪೊಲೀಸ್ ಅಧಿಕಾರಿ ಹಾಗೂ ಯುವಕನೊಬ್ಬನ ನಡುವೆ ಆರಂಭಗೊಳ್ಳುವ ಮಾತಿನ ಚಕಮಕಿ ಹೀಗೆ ಕೊಲೆಯಲ್ಲಿ ಅಂತ್ಯವಾಗುವ ಈ ಸೀನ್ ಅನ್ನು ಬಹಳಷ್ಟು ಜನರು ನಿಜವೆಂದೇ ಭಾವಿಸಿದ್ದರು.