alex Certify ಸೆಲ್ಯೂಟ್‌ ಮೂಲಕ ಹಿಮಾಚಲ ಸಿಎಂ ಮನ ಗೆದ್ದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲ್ಯೂಟ್‌ ಮೂಲಕ ಹಿಮಾಚಲ ಸಿಎಂ ಮನ ಗೆದ್ದ ಶ್ವಾನ

ಗುರುವಾರದಿಂದ ಹಿಮಾಚಲ ಪ್ರದೇಶದಲ್ಲಿ ಮುಂಗಾರು ಅಧಿವೇಶನ ಆರಂಭವಾಗಿದ್ದು, ಈ ವೇಳೆ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿಗಳಿಗೆ ಶ್ವಾನದಳದ ಶ್ವಾನವೊಂದು ಸ್ವಾಗತಿಸಿದೆ. ಸೆಲ್ಯೂಟ್‌ ಮೂಲಕ ಸಿಎಂರನ್ನು ಸ್ವಾಗತಿಸಿದ ಶ್ವಾನದ ಕಾರ್ಯಕ್ಕೆ ಸಿಎಂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಂ ಠಾಕೂರ್‌ ಆಗಮಿಸಿದಾಗ ಅಲ್ಲಿದ್ದ ಡೋರಾ ಎನ್ನುವ ಶ್ವಾನದಳದ ನಾಯಿ, ಮುಖ್ಯಮಂತ್ರಿ ಹಾಗೂ ಸ್ಪೀಕರ್‌ ಅವರನ್ನು ಸ್ವಾಗತಿಸಿದೆ. ಉತ್ತಮ ರೀತಿಯಲ್ಲಿ ಶ್ವಾನ ಸೆಲ್ಯೂಟ್‌ ಹೊಡೆದಿದ್ದಕ್ಕೆ ಮನಸೋತ ಸಿಎಂ, ಡೋರಾಳ ಮೈ ಸವರಿದ್ದಾರೆ. ಕಳೆದೊಂದು ದಶಕದಿಂದ ಶ್ವಾನದಳದಲ್ಲಿರುವ ಈ ಶ್ವಾನ ಮುಂದಿನ ವರ್ಷ ನಿವೃತ್ತಿ ಹೊಂದುತ್ತಿದೆ ಎಂದು ಹೇಳಲಾಗಿದೆ.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಸ್ಫೋಟಕಗಳನ್ನು ಪತ್ತೆ ಹಚ್ಚುವಲ್ಲಿ ಎಕ್ಸ್‌ಪರ್ಟ್‌ ಆಗಿರುವ ಡೋರಾ ಹಾಗೂ ಆಕೆಯ ಗೈಡ್‌ಗೆ ಸಿಎಂ ಗೌರವಿಸಿದ್ದಾರೆ. ಇದೀಗ ಶ್ವಾನದ ಪ್ರಮಾಣಿಕತೆ ಹಾಗೂ ಕೆಲಸಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

— ANI (@ANI) September 10, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...