alex Certify ವಿದೇಶಿ ತಾರೆಯರ ಬೆಂಬಲವನ್ನ ಸ್ವಾಗತಿಸಿದ ದೇಶಿ ರೈತ ಮುಖಂಡರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶಿ ತಾರೆಯರ ಬೆಂಬಲವನ್ನ ಸ್ವಾಗತಿಸಿದ ದೇಶಿ ರೈತ ಮುಖಂಡರು

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನ ವಿರೋಧಿಸಿ ರೈತರು ನಡೆಸುತ್ತಿರುವ ಸುದೀರ್ಘ ಪ್ರತಿಭಟನೆ ದಿನಕ್ಕೊಂದು ಆಯಾಮವನ್ನ ಪಡೆದುಕೊಳ್ತಿದೆ. ಗಣರಾಜ್ಯೋತ್ಸವದಂದು ನಡೆದ ಟ್ರ್ಯಾಕ್ಟರ್​ ರ್ಯಾಲಿ ಹಿಂಸಾಚಾರದ ಘಟನೆ ಮಾಸುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹಾಗೂ ಸ್ವದೇಶಿ ಸೆಲೆಬ್ರಿಟಿಗಳ ವಾರ್ ಜೋರಾಗಿದೆ.

ಪಾಪ್​ ತಾರೆ ರಿಹನ್ನಾ ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಟ್ವೀಟ್​ ಮಾಡುತ್ತಿದ್ದಂತೆಯೇ ಈ ರೈತ ಪ್ರತಿಭಟನೆ ಇನ್ನೊಂದು ದಿಕ್ಕನ್ನೇ ಪಡೆದುಕೊಂಡಿದೆ. ಪರಿಸರ ಕಾರ್ಯಕರ್ತೆ ಗ್ರೇಟಾ ಥನ್​​ಬರ್ಗ್​ನ ವಿವಾದಿತ ಟ್ವೀಟ್​ ಕೂಡ ರೈತ ಪ್ರತಿಭಟನೆಯ ಹಿಂದಿರುವ ಅನೇಕರ ಸಂಚನ್ನ ಬಯಲಿಗೆಳೆಯುತ್ತಿದೆ. ಆದರೆ ಈ ಎಲ್ಲದರ ನಡುವೆ ವಿದೇಶಿಗರ ಬೆಂಬಲವನ್ನ ಪ್ರತಿಭಟನಾನಿರತ ರೈತರು ಸ್ವಾಗತಿಸುತ್ತಿದ್ದಾರೆ.

ಉತ್ತರ ಪ್ರದೇಶದ ಮುಜಾಫರ್ನಗರದ ಭಾರತೀಯ ಕಿಸಾನ್​ ಯೂನಿಯನ್​ ಮುಖಂಡ 51 ವರ್ಷದ ರಾಕೇಶ್​ ಟಿಕೈಟ್​,​ ರಿಹನ್ನಾ ಹಾಗೂ ಗ್ರೇಟಾ ಥನ್​ಬರ್ಗ್​ರ ಬೆಂಬಲವನ್ನ ಸ್ವಾಗತಿಸಿದ್ದಾರೆ. ನನಗೆ ಇವರ ಬಗ್ಗೆ ಹೆಚ್ಚೇನು ಗೊತ್ತಿಲ್ಲ. ಅವರೆಲ್ಲ ಬೆಂಬಲ ಸೂಚಿಸಿದ್ದಿರಬಹುದು. ಆದರೆ ನನಗೆ ಅವರೆಲ್ಲ ಯಾರೆಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...