
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆ, ಉಚಿತ ಕೊರೊನಾ ಟೆಸ್ಟ್ ಹೆಸರಲ್ಲಿ ನಕಲಿ ಇಮೇಲ್‌ಗಳು ಶುರುವಾಗಿದೆ.
ಸದಾ ಒಂದಿಲ್ಲೊಂದು ಪಂಚಿಂಗ್ ಲೈನ್ ಅಥವಾ ಟ್ರೋಲ್ ಮೂಲಕ ಸದ್ದು ಮಾಡುತ್ತಿದ್ದ ಮುಂಬೈ ಪೊಲೀಸ್ ಇದೀಗ ನಕಲಿ ಇಮೇಲ್ ಬಗ್ಗೆ ಎಚ್ಚರದಿಂದ ಇರುವಂತೆ ವಾಣಿಜ್ಯ ನಗರಿಯ ಮಂದಿಗೆ ವಾರ್ನ್ ಮಾಡಿದೆ.
ಉಚಿತ ಕೊರೊನಾ ಪರೀಕ್ಷೆ ಮಾಡಿಸಲು ಈ ಲಿಂಕ್ ಒಪನ್ ಮಾಡಿ ಎನ್ನುವ ಮೇಲ್‌ಗಳು ದೊಡ್ಡ ಸ್ಕ್ಯಾಮ್ ಆಗಿದ್ದು, ಸೈಬರ್ ಕ್ರೈಂ ಮಾಡಲು ಬಳಸಿಕೊಳ್ಳುತ್ತಾರೆ. ಆದ್ದರಿಂದ ದಯವಿಟ್ಟು ಯಾರೂ ಈ ಬಲೆಗೆ ಬೀಳಬಾರದು ಎಂದು ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಅನೇಕರು ಪ್ರತಿಕ್ರಿಯಿಸಿದ್ದು, ಯುವತಿ ಒಬ್ಬಳು ನಾನು ಈ ಬಗ್ಗೆ ದೂರು ನೀಡಿದ್ದೇನೆ ಕ್ರಮವಹಿಸಿ ಎಂದರೆ ಇನ್ನು ಕೆಲವರು ಮಾಹಿತಿ ನೀಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ.