alex Certify ವೈದ್ಯನಾಗಿರುವ ಸ್ನೇಹಿತ ಕೂಡ ನನ್ನ ಕರೆ ಸ್ವೀಕರಿಸುತ್ತಿಲ್ಲ: ಕೊರೊನಾ ಗಂಭೀರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಜೆಪಿ ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯನಾಗಿರುವ ಸ್ನೇಹಿತ ಕೂಡ ನನ್ನ ಕರೆ ಸ್ವೀಕರಿಸುತ್ತಿಲ್ಲ: ಕೊರೊನಾ ಗಂಭೀರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಜೆಪಿ ನಾಯಕ

ಕೊರೊನಾ ಎರಡನೆ ಅಲೆಯಿಂದಾಗಿ ಉಳಿದ ರಾಜ್ಯಗಳಂತೆಯೇ ಬಿಹಾರ ಕೂಡ ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನ ಎದುರಿಸುತ್ತಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಸಂಜಯ್​ ಜೈಸ್ವಾಲ್, ನನ್ನ ಆತ್ಮೀಯ ಗೆಳೆಯನಾದ ವೈದ್ಯ ಕೂಡ ಸಹಾಯ ಮಾಡಲಾಗದ ಪರಿಸ್ಥಿತಿಯಲ್ಲಿದ್ದು ನನ್ನ ಫೋನ್​ ಕಾಲ್​ಗಳನ್ನೇ ಎತ್ತುತ್ತಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಜನರಿಗೆ ಪರಿಸ್ಥಿತಿಯ ಗಂಭೀರತೆಯನ್ನ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೊರೊನಾ ವೈರಸ್​ ವಿರುದ್ಧ ಹೋರಾಡಲು ಉತ್ತಮ ಚಿಕಿತ್ಸೆ ಎಂದರೆ ಸಾಮಾಜಿಕ ಅಂತರ ಕಾಪಾಡೋದು ಹಾಗೂ ಮಾಸ್ಕ್​ಗಳನ್ನ ಧರಿಸೋದು ಆಗಿದೆ. ಆದರೆ ದುರಾದೃಷ್ಟವಶಾತ್​ ಜನರಿಗೆ ಇನ್ನೂ ಈ ಡೆಡ್ಲಿ ವೈರಸ್​ನ ಗಂಭೀರತೆಯ ಬಗ್ಗೆ ಮನವರಿಕೆ ಆಗಿಲ್ಲ ಎಂದು ಜೈಸ್ವಾಲ್​ ಹೇಳಿದ್ದಾರೆ.

ದೇಶದಲ್ಲಿ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎಂದರೆ ವೈದ್ಯನಾಗಿರುವ ನನ್ನ ಆತ್ಮೀಯ ಸ್ನೇಹಿತ ಕೂಡ ನನ್ನ ಕರೆಯನ್ನ ಸ್ವೀಕರಿಸುತ್ತಿಲ್ಲ. ಯಾಕೆಂದರೆ ಅವರೂ ಸಹ ಈ ಪರಿಸ್ಥಿತಿಯಲ್ಲಿ ಅಸಹಾಯಕರಾಗಿದ್ದಾರೆ. ಕೊರೊನಾ ಎರಡನೆ ಅಲೆ ಆರ್ಭಟಕ್ಕೆ ನನ್ನ ಅನೇಕ ಪರಿಚಯಸ್ಥರನ್ನ ನಾನು ಕಳೆದುಕೊಂಡಿದ್ದೇನೆ ಎಂದು ಫೇಸ್​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...