ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಅತ್ಯಂತ ವಿಜೃಂಭಣೆಯಿಂದ ಆಚರಣೆಗೆ ಒಳಗಾಗುವ ಹಬ್ಬ. ನವರಾತ್ರಿ ಹಬ್ಬದ ಪ್ರಯುಕ್ತ ನಗರದ ವಿವಿಧ ಭಾಗಗಳಲ್ಲಿ ದುರ್ಗಾ ಮೂರ್ತಿಯನ್ನ ಕೂರಿಸಿ ಪೂಜಿಸಲಾಗುತ್ತೆ. ಈ ಮೂರ್ತಿಯನ್ನ ನಿರ್ಮಾಣ ಮಾಡೋ ಶಿಲ್ಪಿಗಳು ಏನಾದರೊಂದು ವಿಷಯವನ್ನ ಇಟ್ಟುಕ್ಕೊಂಡು ಅದಕ್ಕೆ ಅನುಗುಣವಾಗಿ ಮೂರ್ತಿಯನ್ನ ಸಿದ್ಧಪಡಿಸ್ತಾರೆ.
ಈ ಬಾರಿ ಕರೊನಾ ಹಾಗೂ ಲಾಕ್ಡೌನ್ ಬಿಟ್ಟರೆ ಮತ್ಯಾವ ವಿಚಾರವೂ ಇಲ್ಲ. ಹೀಗಾಗಿ ಮೂರ್ತಿ ತಯಾರಕರು ದುರ್ಗಾ ಮೂರ್ತಿಯ ಮೂಲಕ ಜನರಲ್ಲಿ ಕರೊನಾ ಜಾಗೃತಿ ಮೂಡಿಸಲು ಚಿಂತಿಸಿದ್ದಾರೆ. ಬಿರ್ಭುಮ್ ಜಿಲ್ಲೆಯ ದುರ್ಗಾ ಪೂಜಾ ಕಮಿಟಿ ದೇವರ ಮೂರ್ತಿಗೆ ಬೆಳ್ಳಿಯ ಮಾಸ್ಕ್ ಹಾಕುವ ಮೂಲಕ ಜಾಗೃತಿ ಮೂಡಿಸಿದೆ.
ಈ ವರ್ಷ ದುರ್ಗಾ ಪೂಜಾ ಕಮಿಟಿ ದುರ್ಗಾ, ಸರಸ್ವತಿ, ಲಕ್ಷ್ಮೀ ಹಾಗೂ ಕಾರ್ತಿಕ ದೇವರ ಮೂರ್ತಿಗೆ ಬೆಳ್ಳಿಯ ಮಾಸ್ಕ್ಗಳನ್ನ ಹಾಕಿದೆ. ಈ ಮೂಲಕ ಜನರಿಗೂ ಕೂಡ ಮಾಸ್ಕ್ ಹಾಕೋದನ್ನ ಮರೆಯಬೇಡಿ ಎಂಬ ಸಂದೇಶವನ್ನ ರವಾನಿಸಿದೆ.