alex Certify ದೇವರಿಗೆ ಮಾಸ್ಕ್​ ಹಾಕಿ ನವರಾತ್ರಿ ಆಚರಣೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವರಿಗೆ ಮಾಸ್ಕ್​ ಹಾಕಿ ನವರಾತ್ರಿ ಆಚರಣೆ…!

Divine Intervention: Durga Idol in Bengal Will Don a Silver Facemask for Covid-19 Awareness

ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಅತ್ಯಂತ ವಿಜೃಂಭಣೆಯಿಂದ ಆಚರಣೆಗೆ ಒಳಗಾಗುವ ಹಬ್ಬ. ನವರಾತ್ರಿ ಹಬ್ಬದ ಪ್ರಯುಕ್ತ ನಗರದ ವಿವಿಧ ಭಾಗಗಳಲ್ಲಿ ದುರ್ಗಾ ಮೂರ್ತಿಯನ್ನ ಕೂರಿಸಿ ಪೂಜಿಸಲಾಗುತ್ತೆ. ಈ ಮೂರ್ತಿಯನ್ನ ನಿರ್ಮಾಣ ಮಾಡೋ ಶಿಲ್ಪಿಗಳು ಏನಾದರೊಂದು ವಿಷಯವನ್ನ ಇಟ್ಟುಕ್ಕೊಂಡು ಅದಕ್ಕೆ ಅನುಗುಣವಾಗಿ ಮೂರ್ತಿಯನ್ನ ಸಿದ್ಧಪಡಿಸ್ತಾರೆ.

ಈ ಬಾರಿ ಕರೊನಾ ಹಾಗೂ ಲಾಕ್​ಡೌನ್​ ಬಿಟ್ಟರೆ ಮತ್ಯಾವ ವಿಚಾರವೂ ಇಲ್ಲ. ಹೀಗಾಗಿ ಮೂರ್ತಿ ತಯಾರಕರು ದುರ್ಗಾ ಮೂರ್ತಿಯ ಮೂಲಕ ಜನರಲ್ಲಿ ಕರೊನಾ ಜಾಗೃತಿ ಮೂಡಿಸಲು ಚಿಂತಿಸಿದ್ದಾರೆ. ಬಿರ್​ಭುಮ್​ ಜಿಲ್ಲೆಯ ದುರ್ಗಾ ಪೂಜಾ ಕಮಿಟಿ ದೇವರ ಮೂರ್ತಿಗೆ ಬೆಳ್ಳಿಯ ಮಾಸ್ಕ್​ ಹಾಕುವ ಮೂಲಕ ಜಾಗೃತಿ ಮೂಡಿಸಿದೆ.

ಈ ವರ್ಷ ದುರ್ಗಾ ಪೂಜಾ ಕಮಿಟಿ ದುರ್ಗಾ, ಸರಸ್ವತಿ, ಲಕ್ಷ್ಮೀ ಹಾಗೂ ಕಾರ್ತಿಕ ದೇವರ ಮೂರ್ತಿಗೆ ಬೆಳ್ಳಿಯ ಮಾಸ್ಕ್​ಗಳನ್ನ ಹಾಕಿದೆ. ಈ ಮೂಲಕ ಜನರಿಗೂ ಕೂಡ ಮಾಸ್ಕ್​ ಹಾಕೋದನ್ನ ಮರೆಯಬೇಡಿ ಎಂಬ ಸಂದೇಶವನ್ನ ರವಾನಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...