alex Certify ಮಕ್ಕಳಂತೆ ಜೋಕಾಲಿ ಆಡಿ ಸಂಭ್ರಮಿಸಿದ್ದಾರೆ 76 ವರ್ಷದ ಅಜ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಂತೆ ಜೋಕಾಲಿ ಆಡಿ ಸಂಭ್ರಮಿಸಿದ್ದಾರೆ 76 ವರ್ಷದ ಅಜ್ಜಿ

ಅನಂತಪುರ: ಹಿರಿಯರು ಸಾಕಷ್ಟು‌ ಜೀವನಾನುಭವ ಹೊಂದಿರುತ್ತಾರೆ. ಸವಿ ನೆನಪು ಹಾಗೂ ಸಂತೋಷದ ಕ್ಷಣಗಳ ನೆನಪಿನ ಮೂಟೆ ಅವರ ಬಳಿ ಇರುತ್ತದೆ.

ಬಿಡುವಿಲ್ಲದ ದಿನಗಳ ನಡುವೆ ಕೆಲವು ಹಿರಿಯರು ಮಕ್ಕಳಂತೆ ಆಟವಾಡಿ, ತಮ್ಮನ್ನು ತಾವು ಮರೆಯುತ್ತಾರೆ.‌ ಮಕ್ಕಳ ಮನಸ್ಸು ಇಟ್ಟುಕೊಂಡರೆ ವಯಸ್ಸು ಎಂಬುದು ಕೇವಲ ಎಣಿಕೆಗೆ ಮಾತ್ರ ಎಂಬುದು ಹಲವರ ಅಭಿಮತ ಅದಕ್ಕಾಗಿ ಹಲವು ಹಿರಿಯರು ಜೋಕಾಲಿಯಾಡುವುದು ಸೇರಿ ಹಲವು ಆಟಕ್ಕೆ ತೆರಳುತ್ತಾರೆ.‌

ಅಂಥ ಅಪರೂಪದ ವಿಡಿಯೋವೊಂದು ಟ್ವಿಟರ್‌ನಲ್ಲಿ ಅಪ್ಲೋಡ್ ಆಗಿದೆ. ಜಯಾ ಎಂಬ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ 76 ವರ್ಷದ ಅಜ್ಜಿ ಜೋಕಾಲಿ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ವಿಶೇಷ ಎಂದರೆ ಅವರು ಜೋಕಾಲಿ ಮೇಲೆ ಕುಳಿತಿಲ್ಲ. ನಿಂತು ಅತ್ಯಂತ ಖುಷಿಯಲ್ಲಿ ಆಟವಾಡುತ್ತಿದ್ದಾರೆ.‌ ನೆಟ್ಟಿಗರು ಅವರ ಜೀವನೋತ್ಸಾಹ ನೋಡಿ ಖುಷಿಪಟ್ಟಿದ್ದಾರೆ. ಕೆಲವರು ಆತಂಕ‌ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...